ಬೆಂಗಳೂರು,ಅ 05: ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ ಆದರೆ ಲೂಟಿಯಾಗಿದೆ ಅದನ್ನು ಭರ್ತಿ ಮಾಡುವ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡುತ್ತಿದ್ದಾರೆ ನಮ್ಮನ್ನು ಟೀಕಿಸುವ ಮೊದಲ ಕೊಡಗಿನಲ್ಲಿ ಮನೆ ಕಟ್ಟಿಸಿಕೊಟ್ಟಿದ್ದೀರಾ ಎನ್ನುವುದನ್ನು ಒಮ್ಮೆ ನೋಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ವರ್ಷ ಕೊಡಗಿನಲ್ಲಿ ಸುರಿದ ಅತಿವೃಷ್ಠಿ ಸಂತ್ರಸ್ತರಿಗೆ ಮನೆ ಕಟ್ಟಿಸಿ ಕೊಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು.ಪ್ರತಿ ಮನೆ ನಿರ್ಮಾಣಕ್ಕೆ 97 ಸಾವಿರ ನೀಡುವುದಾಗಿ ಘೋಷಿಸಿದ್ದರು ಆದರೆ ಇನ್ನೂ ಕೊಡಗಿನಲ್ಲಿ ಯಾರಿಗೂ ಮನೆ ಕಟ್ಟಿಸಿಕೊಟ್ಟಿಲ್ಲ ಆದರೆ ಯಡಿಯೂರಪ್ಪ ಈಗಾಗಲೇ ಮನೆ ಕಟ್ಟಲು 1 ಲಕ್ಷ ರೂ.ಆರ್ ಟಿ ಜಿಎಸ್ ಮೂಲಕ ಹಣ ಪಾವತಿಸುತ್ತಿದ್ದಾರೆ.ಹೀಗಾಗಿ ಕುಮಾರಸ್ವಾಮಿ ಅವರೇ ನೆರೆ ವಿಚಾರದಲ್ಲಿ ರಾಜಕೀಯ ಮಾಡಬೇಡಿ ನೆರೆ ಪರಿಹಾರ ಕಾರ್ಯ ಸಂಬಂಧ ಸರ್ಕಾರದ ಜೊತೆ ಸಹಕರಿಸಿ ಎಂದರು.
ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ,ವಿಜಯೇಂದ್ರ ಅವರಾಗಲಿ ಹೇಳಿಲ್ಲ.ಖಜಾನೆ ಖಾಲಿಯಾಗಿದ್ದರೆ 3000 ಕೋಟಿ ರೂ ಹಣ ಖರ್ಚು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹಿಂದಿನ ಮೈತ್ರಿ ಸರ್ಕಾರದಲ್ಲಿ ಖಜಾನೆ ಲೂಟಿಯಾಗಿದೆ ಅದನ್ನೇ ಹೇಳಿದ್ದಾರೆ ಅಲ್ಲದೆ ಖಜಾನೆ ಭರ್ತಿ ಮಾಡುವ ಕೆಲಸವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದರು.
ನಾನೂ ಕೂಡ ನೆರೆ ಪೀಡಿತ ಪ್ರದೇಶದಿಂದ ಬಂದವನೆ.ಹಿಂದೆಲ್ಲಾ ನೆರೆ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸುತ್ತಿದ್ದರು.ವರ್ಷಗಳು ಆದ ಮೇಲೆ ಪರಿಹಾರ ವಿತರಣೆ ಆಗಿದ್ದನ್ನೂ ನೋಡಿದ್ದೇನೆ.ಆದರೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಅವರೇ ಭೇಟಿ ನೀಡಿದ್ದರು.ಅಷ್ಟೇ ಅಲ್ಲ ತಕ್ಷಣವೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡರು.ನೆರೆ ಬಂದಾಗ ನಮ್ಮ ಯಡಿಯೂರಪ್ಪ ಎಲ್ಲ ಭಾಗಗಳಿಗೆ ಭೇಟಿ ನೀಡಿ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳೂ ಸಹ ಶಕ್ತಿ ಮೀರಿ ಶ್ರಮಿಸಿದ್ದಾರೆ.ಅವರಿಗೆ ಅಭಿನಂದನೆಗಳು ಎಂದರು.
ಇದುವರೆಗೆ ರಾಜ್ಯ ಸರ್ಕಾರ 3000 ಕೋಟಿ ರೂ.ಅನುದಾನ ನೀಡಿದೆ.ಮನೆ ನಿರ್ಮಾಣವಾಗುವವರೆಗೆ ಮನೆ ಬಾಡಿಗೆ ಪಾವತಿಸಿದ್ದಾರೆ. ಅಷ್ಟೇ ಅಲ್ಲ ಭೂ ಕುಸಿತದಿಂದ ಜಮೀನು ಕಳೆದುಕೊಂಡವರಿಗೆ ಪರ್ಯಾಯವಾಗಿ ಜಮೀನು ನೀಡುವ ತೀರ್ಮಾನ ಮಾಡಿದ್ದಾರೆ.ಇದಕ್ಕೆ ಕಂದಾಯ ಸಚಿವ ಆರ್.ಅಶೋಕ್ ರನ್ನು ಅಭಿನಂದಿಸುತ್ತೇನೆ ಎಂದರು.
ಕೇಂದ್ರ ಸರ್ಕಾರದಿಂದ ಅನುದಾನ ನಿರೀಕ್ಷೆ ಸಹಜ.ರಾಜ್ಯದಲ್ಲಿ ವಿವಿಧ ದಿನಾಂಕಗಳಲ್ಲಿ ವಿವಿಧ ಭಾಗಗಳಲ್ಲಿ ನೆರೆ ಬಂದಿದೆ. ಹಾಗಾಗಿ ಒಮ್ಮೆಗೆ ಸರ್ವೆ ಮಾಡಲು ಸಾಧ್ಯವಾಗಿಲ್ಲ.ನೆರೆ ಇಳಿದ ಬಳಿಕ ಅಂದಾಜು ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದ್ದಾರೆ.ದೇಶದ 11 ರಾಜ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಹಾಗಾಗಿ ಕೇಂದ್ರ ಎಲ್ಲ ರಾಜ್ಯಗಳಿಂದ ವರದಿ ಪಡೆದು,ಸಮಾಲೋಚನೆ ಮಾಡಿ ಬಳಿಕ ಒಟ್ಟು ನಷ್ಟದಲ್ಲಿ ಶೇಕಡಾ 70ರಷ್ಟನ್ನು ಬಿಡುಗಡೆ ಮಾಡುತ್ತದೆ ಎಂದು ಪರಿಹಾರ ವಿಳಂಬಕ್ಕೆ ಕಾರಣ ನೀಡಿದರು.
ಈಗ ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಕ್ಕೆ 1200 ಕೋಟಿ ರೂ.ಬಿಡುಗಡೆ ಮಾಡಿದೆ.ಇದನ್ನು ಖರ್ಚು ಮಾಡಿ,ರಾಜ್ಯ ಸರ್ಕಾರ ಬಳಕೆ ಪ್ರಮಾಣಪತ್ರ ಕೊಟ್ಟ ಬಳಿಕ ಎರಡನೆ ಹಂತದಲ್ಲಿ ಹಣ ಬಿಡುಗಡೆಯಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರ 3000 ಕೋಟಿ ರೂ.ಖರ್ಚು ಮಾಡಿರುವುದರಿಂದ ಬಳಕೆ ಪ್ರಮಾಣಪತ್ರವನ್ನು ಬೇಗ ಕೊಡುವುದು ಸುಲಭವಾಗುತ್ತದೆ ಎಂದರು.
ನೆರೆಯಲ್ಲಿ ವೈಯಕ್ತಿಕ ಆಸ್ತಿ ನಷ್ಟವಾಗಿರುವ ಶಾಸಕರು ಮತ್ತು ಸಂಸದರು ಪರಿಹಾರದ ಹಣವನ್ನು ಬಿಟ್ಟುಕೊಡಿ ಎಂದು ಸೂಚನೆ ನೀಡಲು ಸಾಧ್ಯವಿಲ್ಲ. ಆದರೆ ಅವರಾಗಿಯೇ ಅರಿತುಕೊಂಡು ಪರಿಹಾರವನ್ನು ಬಿಟ್ಟುಕೊಟ್ಟರೆ ಉತ್ತಮ ಎಂದು ಕಟೀಲ್ ಅಭಿಪ್ರಾಯಪಟ್ಟರು.
ಪಕ್ಷದ ಶಿಸ್ತು ಮತ್ತು ನಿಯಮದ ಅಡಿಯಲ್ಲಿ ಎಲ್ಲರು ಸಂಯಮದಿಂದ ವತರ್ಿಸ ಬೇಕಾಗುತ್ತದೆ.ಅದಾಗದಿದ್ದರೆ ಕೆಲವೊಮ್ಮೆ ವಿವರಣೆ ಕೇಳಬೇಕಾಗುತ್ತದೆ ಹಾಗಾಗಿ ಯತ್ನಾಳ್ ರಿಂದಲೂ ಸ್ಪಷ್ಟನೆ ಕೇಳಲಾಗಿದೆ ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಿಯಮ ಗೊತ್ತಿಲ್ಲದೇ ಈ ಭಾವನೆ ವ್ಯಕ್ತಪಡಿಸಿರಬಹುದು.ಜನರಿಗೆ ವಿಶ್ವಾಸ ತುಂಬ ಬೇಕು ಎಂದು ಕೇಂದ್ರ ಸಕರ್ಾರ ಅನುದಾನ ಬಿಡುಗಡೆ ಮಾಡಿದೆ. ಚಚರ್ೆ ವಿಪರೀತ ಆದ ಕಾರಣ ಕೊಟ್ಟ ಪರಿಹಾರದ ಬಗ್ಗೆ ಜನರಿಗೆ ತಿಳಿದಿಲ್ಲ, ರಾಜ್ಯ ಸಕರ್ಾರ ಎಲ್ಲೂ ವೈಫಲ್ಯ ಕಂಡಿಲ್ಲ ಎಂದು ಅವರು ಸಕರ್ಾರವನ್ನು ಸಮಥರ್ಿಸಿಕೊಂಡರು.ಅಭಿಪ್ರಾಯ ತಿಳಿಸಿದ್ದಾರೆ.