ಮಾಂಜರಿ 21: ಗಡಿ, ಭಾಷೆಯ ಗೊಂದಲದ ಮಧ್ಯೆಯೇ ನೆರೆಯ ಮಹಾರಾಷ್ಟ್ರ ಈಗ ಕರ್ನಾಟಕದೊಂದಿಗೆ ಜಲ ಸಂಘರ್ಷಕ್ಕೆ ಇಳಿದಂತೆ ತೋರುತ್ತಿದೆ. ಕೃಷ್ಣಾ ನದಿಗೆ 1 ನೀರು ಬಿಡಲು ಹಿಂದೇಟು ಹಾಕುತ್ತಿರುವ 'ಮಹಾ' ಮೊಂಡುತನಕ್ಕೆ ಕೃಷ್ಣಾ ನದಿ ತೀರದ ಜನ ಈಗ ಅಕ್ಷರಶಃ ಕಂಗಾಲಾಗಿದ್ದಾರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಯ್ದಾ ಜಲಾಶಯದಿಂದ ಕೃಷ್ಣಾನದಿಗೆ 2 ಟಿಎಂಸಿ ನೀರು ಬಿಡುವಂತೆ ಮಹಾ ಸಿಎಂಗೆ ಪತ್ರ ಬರೆದು 20 ದಿನಗಳಾಗುತ್ತ ಬಂದರೂ ಮಹಾರಾಷ್ಟ್ರ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಈ ಬಾರಿ ಬಿರು ಬೇಸಿಗೆಗೆ ಉತ್ತರ ಕರ್ನಾಟಕ ಜನ ತತ್ತರಿಸಿದ್ದಾರೆ. ಕೃಷ್ಣಾ ನದಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ನದಿ ತೀರದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ.
ಇಂತಹ ಪರಿಸ್ಥಿತಿಯ ಗಂಭೀರತೆ ಅರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಏ.1ರಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದು ಕೊಯ್ದಾ ಜಲಾಶಯದಿಂದ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಮಹಾರಾಷ್ಟ್ರ ಸರ್ಕಾರ ಈವರೆಗೆ ಕೃಷ್ಣಾ ನದಿಗೆ ಒಂದು ಹನಿ ನೀರು ಬಿಡುಗಡೆ ಮಾಡದೇ ನಿರ್ಲಕ್ಷ್ಯ ವಹಿಸಿದೆ.
ಒಂದು ವೇಳೆ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಟ್ಟಲ್ಲಿ ಕೇವಲ ಬೆಳಗಾವಿಯಷ್ಟೇ ಅಲ್ಲ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರ ದಾಹವೂ ನೀಗಲಿದೆ. ಆದರೂ ಕರ್ನಾಟಕ ಸರ್ಕಾರದ ಮನವಿಗೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸದಿರುವುದು ದುರದೃಷ್ಟಕರ. -
ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದರೂ ಕುಡಿಯುವ ನೀರನ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಕೇಳಿಬರತೊಡಗಿದೆ. ಕೃಷ್ಣಾ ನದಿ ಪಾತ್ರದ ರೈತರು ಕೊಯ್ತಾ ಜಲಾಶಯದಿಂದ ನೀರು ಬಿಡಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದರೆ, ಇತ್ತ ಕೊಯ್ತಾ ಜಲಾಶಯದಿಂದ ನೀರು ಬಿಡಿಸುವ ವಿಚಾರದಲ್ಲೂ ರಾಜ್ಯ ಬಿಜೆಪಿ ನಾಯಕರಿಗೊ ಕೂಡ ಶರಣಾಗಿದ್ದಾರೆ ಎಂಬ ಆರೋಪ ತ್ತಿದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಅಗತ್ಯ ವಾಗಿರುವ ಕುಡಿಯುವ ನೀರಿನ್ ವಿಚಾರ ದಲ್ಲಿಯೂ ಮಹಾರಾಷ್ಟ್ರ ಸರ್ಕಾರ ಕೂಡ ಸಮರ್ಥ ಮಾಡುತ್ತಿರುವುದು ವಿಪರ್ಯಾಸ
ವಿಳಂಬಕ್ಕೆ ಆಕ್ರೋಶ
ಮಳೆಗಾಲದಲ್ಲಿ ಬೇಕಾಬಿಟ್ಟಿಯಾಗಿ ಕೊಯ್ತಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಮಹಾರಾಷ್ಟ್ರ ಸರ್ಕಾರ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವಂತೆ ಮಾಡುತ್ತದೆ. ಆದರೆ, ಈಗ ಕೃಷ್ಣಾನದಿ ಒಡಲು ಬರಿದಾದರೂ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿ ಅನುಸರಿಸುವ ಮೂಲಕ ರಾಜಕೀಯ ಮಾಡುತ್ತಿದ್ದು, ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದೆ.