ಪುರಿ, ಮಾ 19, ಪುರಿ ಜಗನ್ನಾಥ್ ದೇಗುಲದ ಆಡಳಿತ ಯೆಸ್ ಬ್ಯಾಂಕ್ ನಲ್ಲಿದ್ದ 397.23 ಕೋಟಿ ರೂ.ಗಳನ್ನು ದೇಗುಲದ ಎಸ್ ಬಿಐ ಖಾತೆಗೆ ವರ್ಗಾಯಿಸಿದೆ. ಇದು 389 ಕೋಟಿ ರೂ. ಠೇವಣಿ ಮತ್ತು 8.23 ಕೋಟಿ ರೂ. ಬಡ್ಡಿಯನ್ನು ಒಳಗೊಂಡಿದೆ. ದೇಗುಲದ ಹಣವನ್ನು ಯೆಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವುದಕ್ಕೆ ರಾಜಕೀಯ ಪಕ್ಷಗಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಯೆಸ್ ಬ್ಯಾಂಕ್ ನಲ್ಲಿ ಉಳಿದಿರುವ 156 ಕೋಟಿ ರೂ. ಠೇವಣಿ ಅವಧಿ ಮುಗಿದ ಮೇಲೆ ಹಿಂಪಡೆಯುವುದಾಗಿ ಎಸ್ ಜೆಟಿಎ ಮುಖ್ಯ ಆಡಳಿತಗಾರ ಡಾ.ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.