ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮ
ಮುಂಡರಗಿ 15: ಕನ್ನಡ ಜನಾಭಿವೃದ್ಧಿ ವೇದಿಕೆ ಜಿಲ್ಲಾ ಹಾಗೂ ತಾಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ 51ರ ಸಂಭ್ರಮಾಚರಣೆ ಹಾಗೂ ನ.1ರ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಜ.17ರಂದು ಕನ್ನಡದಲ್ಲಿ ಕನ್ನಡ-ಕರ್ನಾಟಕ ಎಂಬ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಜರುಗಲಿದೆ ಎಂದು ಕನ್ನಡ ಜನಾಭಿವೃದ್ಧಿ ವೇದಿಕೆಯ ಜಿಲ್ಲಾಧ್ಯಕ್ಷ ಗಣೇಶ ಹಾತಲಗೇರಿ ಹೇಳಿದರು.
ತಾಲೂಕಿನ ಬರದೂರ ಗ್ರಾಮದ ಎನ್.ಎನ್.ಗೋಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಕನ್ನಡದಲ್ಲಿ ಕನ್ನಡ-ಕರ್ನಾಟಕ ಎಂಬ ರಸಪ್ರಶ್ನೆ ಕಾರ್ಯಕ್ರಮದ ಚಾಲನೆಯಲ್ಲಿ ಕಜವೆ ತಾಲೂಕು ಅಧ್ಯಕ್ಷ ಸುಭಾಷ ಕಿತ್ನೂರ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ ಮಾಜಿ ಸದಸ್ಯರಾದ ಅಂದಪ್ಪ ಹಾರೋಗೇರಿ ಹಾಗೂ ಮಲ್ಲಪ್ಪ ಗೌರಿಪುರ ಉದ್ಘಾಟಿಸಲಿದ್ದಾರೆ. ಗ್ರಾ.ಪಂ ಪಿಡಿಒ ಫಕ್ರುಸಾಬ್ ನದಾಫ್ ಹಾಗೂ ಸಹಾಯಕ ಲೆಕ್ಕ ಪರಿಶೋಧಕ ಸಂತೋಷ ಮಸೂತಿ, ಎಸ್.ಎಂ.ಕೆ ಸೀಡ್ಸ್ ಮಾಲಿಕ ಶರಣಪ್ಪ ಕುರಿ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಲ್.ಜಿ.ಹುಡೇದ, ಗಣೇಶ ಹಾತಲಗೇರಿ, ಉಮೇಶ ಹಿರೇಮಠ, ಅಶೋಕ ಹೊಸಮನಿ, ಮಂಜುನಾಥ ಕುರಿ,, ಚನ್ನಬಸಪ್ಪ ಹೊಸಮನಿ, ಮೈಲಪ್ಪ ತಳಗೇರಿ ಸೇರಿದಂತೆ ವೇಧಿಕೆಯ ಪದಾಧಿಕಾರಿಗಳು ಪಾಲ್ಗೊಳ್ಳುವರು.
ಮದ್ಯಾಹ್ನ 2 ಗಂಟೆಗೆ ಜರುಗುವ ರಸಪ್ರಶ್ನೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಜವೆ ಜಿಲ್ಲಾಧ್ಯಕ್ಷ ಗಣೇಶ ಹಾತಲಗೇರಿ ಅಧ್ಯಕ್ಷತೆವಹಿಸುವರು. ರೋಣ ಶಾಸಕ ಜಿ.ಎಸ್.ಪಾಟೀಲ್, ಮಿಥುನ್.ಜಿ.ಪಾಟೀಲ್ ಹಾಗೂ ಕೆಪಿಸಿಸಿ ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಬಹುಮಾನ ವಿತರಣೆ ಮಾಡುವರು. ಎಸ್.ಎಂ.ಕೆ ಸ್ಟೋನ್ ಕ್ರೇಸರ್ ಮಾಲಿಕ ಗೌಸುಸಾಬ ಡೋಟಿಹಾಳ ಪ್ರಶಸ್ತಿ ದಾನವನ್ನು ಮಾಡಲಿದ್ದಾರೆ. ಭೂದಾನಿಗಳು ಈಶ್ವರ್ಪ ಗೋಡಿ ಸೇರಿಂದತೆ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಮೇವುಂಡಿ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಬರದೂರ ಶಾಲೆಯ ಎಸ್.ಡಿ.ಎಂ.ಸಿ ಸರ್ವ ಪದಾಧಿಕಾರಿಗಳು ಹಾಗೂ ಶಾಲಾ ಎಲ್ಲಾ ಸಿಬ್ಬಂದಿಗಳು ಭಾಗವಹಿಸುವರು. ಈ ವೇಳೆ ಸುಭಾಷ್ ಕಿತ್ನೂರ, ಉಮೇಶ ಹಿರೇಮಠ, ಅಶೋಕ ಹೊಸಮನಿ, ಮಂಜುನಾಥ ಕುರಿ ಇದ್ದರು.