ಬಾಗಲಕೋಟೆ13: ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರಿಗೆ ಸಕರ್ಾರವು ಅಐಂಖಖಿ ಆಪ್ ತಂತ್ರಾಂಶ ಬಳಸಿ ಕಾಮಗಾರಿಗಳ ಗುಚ್ಛ ತಯಾರಿಸಲು ತರಬೇತಿ ನೀಡಲಾಗುತ್ತಿದ್ದು, ಅದರ ಸದುಪಯೋಗವನ್ನು ತಂತ್ರಾಂಶಗಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಆಯ್ಎಸ್ ಬೆಸಿಕ್ ಪ್ಲಾನಿಂಗ್ ಅಳವಡಿಸಿಕೊಂಡು ಕಾಮಗಾರಿಗಳ ಗುಚ್ಛ ತಯಾರಿಸುವಲ್ಲಿ ಅಐಂಖಖಿ ತಂತ್ರಜ್ಞಾನ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ತುರ್ತು ಕಾಮಗಾರಿಗಳ ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಇಲ್ಲಿಯವರೆಗೆ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಲು ಮತ್ತು ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಕೇವಲ ಉದ್ಯೋಗ ಮಾತ್ರವಲ್ಲದೇ ಜನಸಾಮಾನ್ಯರ ಜೀವನ ಉತ್ತಮ ಮಟ್ಟಕ್ಕೆ ಈ ಉದ್ಯೋಗ ಖಾತ್ರಿ ಯೋಜನೆ ಸಹಾಯಕಾರಿಯಾಗಿದೆ. ಉದ್ಯೋಗ ಖಾತ್ರಿ ಯೋಜನೆ ಎಂದರೆ ಕಾಮಧೇನು ಕಲ್ಪವೃಕ್ಷವಿದ್ದಂತೆ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಅರಿತುಕೊಂಡು ಈ ಯೋಜನೆಯಡಿ ಸಹಕಾರ ನೀಡಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನಮ್ಮ ಜಿಲ್ಲೆಗೆ ಕಳೆದ ವರ್ಷ 38 ಲಕ್ಷ ರೂ. ಅನುದಾನ ಬಂದಿದ್ದು, ಈ ಮಾರ್ಚ್ ತಿಂಗಳ ಅಂತ್ಯದವರೆಗೆ 33 ಲಕ್ಷ ರೂಗಳಷ್ಟು ಕಾಮಗಾರಿ ಸಂಪೂರ್ಣವಾಗಲಿದೆ.
ಈಗಾಗಲೇ ಮುಗಿದಿರುವ ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸದೆ ಆರಂಭಗೊಳ್ಳದೆ ಇರುವ ಕಾಮಗಾರಿಗಳಿಗೆ ಹೆಚ್ಚು ಒತ್ತು ನೀಡಬೇಕು ಅದಕ್ಕಾ ಈ ತಂತ್ರಾಂಶ ಬಳಕೆ ಮಾಡಬೇಕು. ತಂತ್ರಾಂಶಗಾರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸರಿಯಾದ ಮಾಹಿತಿಯನ್ನು ದಾಖಸಿಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ತಾಲೂಕು ಪಂಚಾಯತಿಗೆ ಭೇಟಿ ನೀಡಿ ಸಮಸ್ಯೆಯನ್ನು ಸರಿಪಡಿಸಬೇಕು ಎಂದರು.
ತರಬೇತಿ ನೀಡಿದ ಫ್ಇಎಸ್ ಸಂಸ್ಥೆಯ ಇನ್ನೊರ್ವ ಅಧಿಕಾರಿ ಧನಶೇಖರ ಹಾಗೂ ಎಫ್ಇಎಸ್ ಸಂಸ್ಥೆಯರಾದ ಉತ್ತನ್ನ ಅವರು ಮಾತನಾಡಿ ಆಫ್ ಬಳಕೆ ಮಾಡುವ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಿಎಸ್, ಸಿಪಿಒ, ಎಡಿಪಿಸಿ. ಡಿಎಮ್ಆಯ್ಎಸ್ ಹಾಗೂ ನರೇಗಾ ಯೋಜನೆಯ ಎಲ್ಲ ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.