ಬೋಧಕ ಬೋಧಕೇತರ ಸಿಬ್ಬಂದಿಗೆ ತರಬೇತಿ

ಗದಗ 30: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಜ. 23ರಿಂದ ಜ. 24ರವರೆಗೆ ಶೈಕ್ಷಣಿಕ ಹಾಗೂ ಆಡಳಿತ ಎಂಬ ವಿಷಯದ ಕುರಿತು ತರಬೇತಿ ನೀಡಲಾಯಿತು.

ತರಬೇತಿಯ ಮೊದಲ ದಿನ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮ(ಕೆಪಿಟಿಟಿ) ಕುರಿತು ಧಾರವಾಡ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶ್ರೀಮತಿ. ಕವಿತಾ ಎ.ಎಸ್. ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್ಆರ್)ಗಳ ಬಗ್ಗೆ ಕೃಷಿ ಇಲಾಖೆಯ ನಿವೃತ್ತ ಅಧಿಕ್ಷಕ ಎಸ್.ಬಿ. ಚಾವಡಿ ಉಪನ್ಯಾಸ ನೀಡಿದರು. ಆ.24ರಂದು ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ.ಎಂ.ಎಂ. ಅಪ್ಪಣ್ಣವರ ಅವರು ವಿಶ್ವವಿದ್ಯಾಲಯ ಮಟ್ಟದ ಶೈಕ್ಷಣಿಕ ಪ್ರಾಮುಖ್ಯತೆ, ಧಾರವಾಡದ ನಿವೃತ್ತ ತಹಸೀಲ್ದಾರ ಬಸವರಾಜ ಯಲಿಗಾರ ಮಾಹಿತಿ ಹಕ್ಕು ಕಾಯ್ದೆ ಹಾಗೂ ಬೆಳಗಾವಿಯ ನಿವೃತ್ತ ಖಜಾನೆ ಅಧಿಕಾರಿ ಶಂಕರಗೌಡ ನಾಗನುರಿಯವರು ಕಚೇರಿಗಳಲ್ಲಿನ ಹಣಕಾಸಿನ ವ್ಯವಹಾರಿಕ್ಕೆ ಸಂಬಂಧಿಸಿದ ಲೆಕ್ಕ ನಿರ್ವಹಣೆ ಕುರಿತು ಸಿಬ್ಬಂದಿಗಳಿಗೆ ತರಬೇತಿ ನೀಡಿದರು.

   ಈ ಸಂದರ್ಭದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೋ.ಆರ್. ನಾಗರಾಜ, ಜಾನುವಾರು ಸಾಕಾಣಿಕ ಸಂಕೀರ್ಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಂಚಶೀಲ, ತರಬೇತಿ ಸಂಯೋಜಕರಾಗಿ ವಿ.ಎಸ್. ನವಲಗುಂದ, ಡಾ. ಸುನಿತ, ಡಾ.ಮನಿಶಾ, ಡಾ.ಧರ್ಮರಾಜ ಜಿ.ವೈ. ಇದ್ದರು.