ಕಬ್ಬು ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ

ಬೆಳಗಾವಿ 28: ಕೆಎಲ್ಇ ಸಂಸ್ಥೆಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸುಮಿಟುಮೊ ಪ್ರೈವೆಟ್ ಲಿಮಿಟೆಡ್, ಜಪಾನ್ ಇವರ ಸಂಯುಕ್ತಾಶ್ರಯದಲ್ಲಿ ಕಬ್ಬು ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಧಾರವಾಡ ಶೇಂಗಾ ಅಖಿಲ ಭಾರತ ಸಮನ್ವಯ ಯೋಜನೆ ವಿಜ್ಞಾನಿ  ಡಾ. ಬಸವರಾಜ ಏಣಗಿ ಉದ್ಘಾಟಿಸಿದರು. ಶೇಂಗಾ ಅಖಿಲ ಭಾರತ ಸಮನ್ವಯ ಯೋಜನೆ ವಿಜ್ಞಾನಿ  ಡಾ. ಪಿ.ಎಸ್. ತಿಪ್ಪಣ್ಣವರ, ಅಧ್ಯಕ್ಷತೆ ವಹಿಸಿದ್ದರು.

ಡಾ. ಸಂಜಯ  ಬ. ಪಾಟೀಲ  ವಿಜ್ಞಾನಿಗಳು, ಕಬ್ಬು ಸಂಶೋಧನಾ ಕೇಂದ್ರ, ಸಂಕೇಶ್ವರ ಇವರು ಭಾಗವಹಿಸಿ ಉತ್ತರ ಕನರ್ಾಟಕಕ್ಕೆ ಸೂಕ್ತವಾದ ಕಬ್ಬು ತಳಿಗಳ ಪರಿಚಯ ಮತ್ತು ಗುಣಧರ್ಮಗಳನ್ನು ಸವಿಸ್ತಾರವಾಗಿ ತಿಳಿಸಿದರು. ಸಕ್ಕರೆ ಕಾಖರ್ಾನೆ ಹಾಗೂ ರೈತರಿಗೂ ಲಾಭ ಸಿಗುವಂತಹ ತಳಿಗಳ ಮಾಹಿತಿ ನೀಡಿದರು.

ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಪಿ.ಎಸ್.ತಿಪ್ಪನ್ನವರ ಗೊಣ್ಣೆ ಹುಳುವಿನ, ಬಾಧೆಯ ಲಕ್ಷಣಗಳು, ಕೀಟದ ಜೀವನಚಕ್ರ ಮತ್ತು ಸಮಗ್ರ ನಿರ್ವಹಣೆಯ ಕ್ರಮಗಳನ್ನು ವಿವರಿಸಿ, ಜೈವಿಕ ಕೀಟನಾಶಕ ಮೆಟರೈಝಿಯಂ ಉಪಯೋಗಿಸಲು ಹಾಗೂ ಸಾಮೂಹಿಕವಾಗಿ ನಿಯಂತ್ರಣ ಕ್ರಮಗಳನ್ನು ಅಳವಡಿಸಲು ಕಬ್ಬು ಅಭಿವೃದ್ಧಿ ಅಧಿಕಾರಿಗಳ ಮೂಲಕ ರೈತರಿಗೆ ಸಂದೇಶ ನೀಡಲು ತಿಳಿಸಿದರು.

ವಿಜ್ಞಾನಿಗಳಾದ ಡಾ. ಬಸವರಾಜ. ಏಣಗಿ, ಇವರು ಕಬ್ಬು ಉತ್ಪಾದನೆ ಹೆಚ್ಚಿಸಲು ಅನೇಕ ನೂತನ ತಂತ್ರಜ್ಞಾನಗಳಾದ ಹನಿ ನೀರಾವರಿ, ರಸ ಗೊಬ್ಬರಗಳ ಬಳಕೆ ಹಾಗೂ ಕಳೆ ನಿರ್ವಹಣೆ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಜಿ. ಬ. ವಿಶ್ವನಾಥ ಕೂಳೆ ಕಬ್ಬು ನಿರ್ವಹಣೆ ಹಾಗೂ ಕಬ್ಬಿನ ರವದಿಯ ಮರು ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಡಾ.ಎಸ್.ಎಸ್. ಹಿರೇಮಠ ಕಬ್ಬಿಗೆ ತಗಲುವ ರೋಗ ನಿರ್ವಹಣೆ ಹಾಗೂ ರೋಗ ನಿರ್ವಹಣೆಯಲ್ಲಿ ಜೈವಿಕ ಪೀಡೆನಾಶಕಗಳ ಉಪಯೋಗದ ಕುರಿತು ಸವಿಸ್ತಾರ ಚಿತ್ರಣ ನೀಡಿದರು. ಮತ್ತು ಗೊಣ್ಣೆ ಹುಳುವಿನ ನಿರ್ವಹಣೆಗಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಟರೈಝಿಯಂ ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಮಾರಾಟಕ್ಕೆ ಲಭ್ಯವಿರುವ ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲೆಯ ವಿವಿಧ ಸಕ್ಕರೆ ಕಾಖರ್ಾನೆಯ ಕೃಷಿ ಅಭಿವೃದ್ಧಿ ಅಧಿಕಾರಿ ವರ್ಗದವರು ಭಾಗವಹಿಸಿದ್ದರು. 

ಡಾ. ಎಸ್. ಎಸ್. ಹಿರೇಮಠ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಡಾ. ಜಿ. ಬ. ವಿಶ್ವನಾಥ ವಂದಿಸಿದರು. ಪ್ರವೀಣ ಯಡಹಳ್ಳಿ ಹಾಗೂ ವಿಕಾಸ ಪಾಟೀಲ ಉಪಸ್ಥಿತರಿದ್ದರು.