ನೂತನ ಗೃಹರಕ್ಷಕ ದಳದ ಸದಸ್ಯರಿಗೆ ತರಬೇತಿ
ಕೊಪ್ಪಳ 03: ಕೊಪ್ಪಳದ ಡಿಎಆರ್ ತರಬೇತಿ ಕವಾಯತು ಮೈದಾನದಲ್ಲಿ ಕೊಪ್ಪಳ ಜಿಲ್ಲೆಯ ನೂತನ ಗೃಹರಕ್ಷಕ ದಳದ ಸದಸ್ಯರಿಗೆ ಹತ್ತು ದಿನಗಳ ಮೂಲ ತರಬೇತಿ ಶಿಬಿರಕ್ಕೆ ಚಾಲನೆ ದೊರೆಯಿತು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ ರಾಮ್ ಎಲ್ ಅರಸಿದ್ದಿ ಮಾತನಾಡಿ ಗೃಹರಕ್ಷಕ ರಕ್ಷಕದಳಕ್ಕೆ ಸೇರೆ್ಡಯಾದ ನೂತನ ಸದಸ್ಯರಿಗೆ ನಮ್ಮ ಪೋಲಿಸ್ ಇಲಾಖೆಯ ತರಬೇತಿದಾರರು ಜೋತೆಗೂಡಿ ಗೃಹರಕ್ಷಕ ದಳದ ಸದಸ್ಯರಿಗೆ ಶಿಸ್ತು ಹಾಗೂ ಕರ್ತವ್ಯಪಾಲನೆ ಸೇರಿದಂತೆ ಪ್ರಥಮ ಚಿಕಿತ್ಸೆ, ಅಗ್ನಿಶಮನ,ಲಾಟಿ, ಬಂದೂಕು ತರಬೇತಿಯನ್ನು ನೀಡಲಾಗುತ್ತದೆ, ತರಬೇತಿಯಲ್ಲಿ ಅಶಿಸ್ತು ಸಹಿಸುವುದಿಲ್ಲ ಪೋಲಿಸ್ ಇಲಾಖೆಯ ಜೋತೆಗೆ ಕೆಲಸ ಮಾಡಲು ಬೇಕಾದ ಸಾಮಥ್ರ್ಯ ಈ ತರಬೇತಿಯಲ್ಲಿ ಪಡೆಯಬೇಕು. ಇವರಿಗೆ ಎಲ್ಲಾ ತರಹದ ಸಹಕಾರ ನೀಡಲಾಗುತ್ತದೆ ಉತ್ತಮ ಗೃಹರಕ್ಷಕರಾಗಿ ಈ ಹತ್ತು ದಿನದ ತರಬೇತಿಯನ್ನು ಪೂರ್ಣ ಗೋಳಿಸಲು ಕರೆ ನೀಡಿದರು.ನಂತರ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಪೋಲಿಸ್ ಉಪ ಅಧಿಕ್ಷಕ ಹೇಮಂತಕುಮಾರ್ ಮಾತನಾಡಿ ತರಬೇತಿಯಲ್ಲಿ ಸಮಯ ಪಾಲನೆ ಮುಖ್ಯ ವಾಗಿದೆ ಪ್ರತಿಯೊಂದು ಮಾಹಿತಿಯನ್ನು ತಿಳಿದು ಕೊಂಡು ಮನನ ಮಾಡಿಕೊಳ್ಳಬೇಕು.ಇದು ನಿಮಗೆ ಒದಗಿದ ಸುವರ್ಣ ಅವಕಾಶ ಎಂದು ಹೇಳಿದರು. ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿಯನ್ನು ಕುಷ್ಟಗಿ ಘಟಕದ ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ವಹಿಸಿಕೊಂಡು ಸ್ವಾಗತಿಸಿ ವಂದಿಸಿದರು.