ತಂಬಾಕು ದುಷ್ಪರಿಣಾಮದ ಬಗ್ಗೆ ತರಬೇತಿ ಕಾಯರ್ಾಗಾರ

ತಂಬಾಕು ದುಷ್ಪರಿಣಾಮದ ಬಗ್ಗೆ ತರಬೇತಿ ಕಾಯರ್ಾಗಾರ

ಬೆಳಗಾವಿ, 18: ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಶರೀರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಈತ್ತಿಚಿನ ದಿನಗಳಲ್ಲಿ ಯುವಕರು ಇವುಗಳ ದಾಸರಾಗಿ  ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿವುದು ವಿಷಾದಕರ ಸಂಗತಿಯಂದು ಅಭಿಪ್ರಾಯ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲೆಯನ್ನು  ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸುವಂತೆ  ತಮ್ಮ ಪೋಲಿಸ ಇಲಾಖೆಯ ಸಿಬ್ಬಂದಿಗಳಿಗೆ ಡಿ ಎಸ್ ಪಿ, ಸಿಸಿಆರ್ಪಿ  ಗಡಾಜಿ ಅವರು ಕರೆ ನೀಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೋಲಿಸ ಇಲಾಖೆ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರ ಸಹಯೋಗದಲ್ಲಿ (ಜ.16) "ಪೋಲಿಸ  ಅಧಿಕಾರಿಗಳಿಗೆ " ತಂಬಾಕು  ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಒಂದು ದಿನದ ತರಬೇತಿ ಕಾಯರ್ಾಗಾರ" ಜಿಲ್ಲಾ ಪೋಲಿಸ ವರಿಷ್ಠಧಿಕಾರಿಗಳ ಸಭಾ ಭವನದಲ್ಲಿ ಜರುಗಿಸಲಾಯಿತು. 

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ ವರಿಷ್ಠಧಿಕಾರಿಗಳಾದ ಸಿ ಎಚ್ ಸುಧೀರಕುಮಾರ ರೆಡ್ಡಿ ಅವರು ಮಾತನಾಡಿ, ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಕುರಿತು ಹಾಗೂ ನಿಯಂತ್ರಣ ಕಾರ್ಯಗಳನ್ನು ಹಮ್ಮಿಕೋಳ್ಳುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಎಲ್ಲ ರೀತಿಯ ಸಹಾಯ ಸಹಕಾರವನ್ನು ಜಿಲ್ಲಾ ಪೋಲಿಸ ಇಲಾಖೆಯಿಂದ ನೀಡುವುದಾಗಿ  ಎಂದು ಬರವಸೆ ನೀಡಿದರು.

ಡಾ: ಎಮ್.ಎಸ್ ಪಲ್ಲೇದ  ಜಿಲ್ಲಾ ಅಂಕಿತ ಅಧಿಕಾರಿಗಳು ಆಹಾರ ಗುಣಮಟ್ಟ ಸುರಕ್ಷತೆ ಪ್ರಾಧಿಕಾರ ಹಾಗೂ ಮಲೇರಿಯಾ ನಿಯಂತ್ರಣಾಧಿಕಾರಿಗಳು, ಬೆಳಗಾವಿ ಇವರು ತಂಬಾಕು ನಿಯಂತ್ರಣ ಕಾಯ್ದೆ-2003ನ್ನು  ಸರಿಯಾದ ರೀತಿಯಲ್ಲಿ ಅನುಷ್ಟಾನ ಮಾಡಬೇಕು. ಇದು ಆರೋಗ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ ಇದರಲ್ಲಿ ವಿವಿಧ ಇಲಾಖೆಯ ಸಹಬಾಗಿತ್ವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ: ಅಂಜನಾ ಬಾಗೇವಾಡಿ ಉಪ ಪ್ರಾಂಶುಪಾಲರು ಕೆ.ಎಲ್. ಇ ದಂತ ವೈದ್ಯಕೀಯ ಮಹಾವಿದ್ಯಾಲಯ ಇವರು ತಂಬಾಕು ಸೇವನೆಯಿಂದ ಬಾಯಿ ಕ್ಯಾನ್ಸರ ಕುರಿತು ಪಿಪಿಟಿ ಮೂಲಕ  ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ: ಬಿ.ಎನ್ ತುಕ್ಕಾರ ಅವರು ಮಾತನಾಡಿ, ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಹಲವಾರು ರೀತಿಯ ದುಷ್ಪರಿಣಾಮ ಬಿರುತ್ತವೆ ಹಾಗೂ ತಂಬಾಕಿನಲ್ಲಿ ವಿವಿಧ ರೀತಿಯ ರಾಸಾಯನಿಕ ಆಂಶಗಳಿರುತ್ತವೆ ಹೀಗಾಗಿ ಸಾರ್ವನಿಕರು ತಂಬಾಕು ಸೇವನೆ ತ್ಯೆಸಿಸಬೇಕು ಎಂದು ತಿಳಿಸಿದರು.

ಕಾಯರ್ಾಗಾರದಲ್ಲಿ ಪೋಲಿಸ ಸಿಬ್ಬಂದಿ ವರ್ಗದವರು ಹಾಜರಿದ್ದರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ  ಸಮಾಜ ಕಾರ್ಯಕತರ್ೆಯಾದ ಕುಮಾರಿ ಕವಿತಾ ರಾಜನ್ನವರ ನಿರೂಪಿಸಿದರು. ಜಿಲ್ಲಾ ಸಲಹೆಗಾರರು ಡಾ.ಶ್ವೇತಾ ಪಾಟೀಲ ವಂದಿಸಿದರು.