ಆತ್ಮ ರಕ್ಷಣೆಗೆ ಪೋಲೀಸ ಇಲಾಖೆಯಿಂದ ತರಬೇತಿ

ಲೋಕದರ್ಶನ ವರದಿ

ಶಿರಹಟ್ಟಿ 20: ಕಾನೂನು ಉಲ್ಲಂಘನೆ ಮಾಡುವವರಿಗೆ ತಿಳುವಳಿಕೆ ಮೂಡಿಸುವ ಉದ್ದೇಶದ ಜೊತೆಗೆ ಮಹಿಳೆಯರಿಗೆ ಯಾರ ಸಹಾಯವಿಲ್ಲದೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಪೋಲೀಸ ಇಲಾಖೆ ಹೊಸದೊಂದು ಯೋಜನೆ ಹಾಕಿಕೊಂಡು ಶಾಲೆ ಹಾಗೂ ಕಾಲೇಜು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಗದಗ ಗ್ರಾಮೀಣ ಭಾಗದ ಸಿಪಿಆಯ್ ಶಿದ್ಲಿಂಗಪ್ಪಗೌಡ ಪಾಟೀಲ ತಿಳಿಸಿದರು. 

     ಅವರು ಸಮೀಪದ ಮುಳಗುಂದದ ಎಸ್ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳಿಗೆ ಕನರ್ಾಟಕ ಪೋಲೀಸ ಇಲಾಖೆಯವರು ಚನ್ನಮ್ಮ ಪೋಲೀಸ ಪಡೆ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗುತ್ತಿರುವ ಯುವಕರು ಹೆಚ್ಚಾಗುತ್ತಿದ್ದು, ಕಾಲೇಜುಗಳೇ ಅವುಗಳ ಮಾರಾಟ ಕೇಂದ್ರಗಳಾಗಿವೆ. ಎಳೆಯ ಮನಸ್ಸಿನ ಮೇಲೆ ಪ್ರಭಾವ ಬೀರಿ ಇಂತಹ ಚಟಗಳಿಗೆ ನೂಕುವ ಅನೇಕ ಜಾಲಗಳಿವೆ. ತಾವು ಇಂತಹ ಚಟಗಳಿಗೆ ಬಲಿಯಾಗುತ್ತಿರುವದೇನಾದರೂ ಕಂಡುಬಂದಲ್ಲಿ 100ಕ್ಕೆ ಕರೆ ಮಾಡಿ ಎಂದರು.ಕಾಲೇಜಿನ ಪ್ರಾಚಾರ್ಯ ಸಿ.ಎಚ್. ದೊಡ್ಡಮನಿ, ಮಕ್ಕಳ ಆತ್ಮರಕ್ಷಣೆಗೆ ಇದೊಂದು ಉತ್ತಮ ಕಲೆಯಾಗಿದ್ದು, ಈ ಕಲೆಯ ಜೊತೆಗೆ ಧೈರ್ಯ ಮಕ್ಕಳಿಗೆ ಬರಬೇಕು. ರಾಷ್ಟ್ರದಲ್ಲಿ ಗಂಡಿನಷ್ಟೇ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿಯೂ ಬೆಳೆಯುತ್ತಿದ್ದರೂ ಮಹಿಳೆಯರ ಮೇಲೆ ಒಂದಿಲ್ಲೊಂದು ದೌರ್ಜನ್ಯ ನಡೆಯತ್ತಲೇ ಇವೆ ಎಂದು ಖೇದ ವ್ಯಕ್ತಪಡಿಸಿದರು. 

     ಈ ಸಂದರ್ಭದಲ್ಲಿ ಮಹಿಳಾ ಪೇದೆಗಳಾದ ಎಂ.ಎನ್. ಜೆಟ್ಟೆಪ್ಪನವರ, ಎಸ್.ಡಿ. ಭೂತಪ್ಪನವರ, ಆರ್.ಎಂ. ಗೌಡರ, ಕೆ.ಎನ್. ಕೂಬಿಹಾಳ, ಎನ್.ಕೆ. ಸೋಮನವರ, ಎ.ಎ. ಅಗಸರ, ಎಂ.ಎ. ಮುಲ್ಲಾನವರ, ಎಫ್.ಎಸ್. ಹುಬ್ಬಳ್ಳಿ ಇವರು ಮಕ್ಕಳಿಗೆ ಸಮಾಜದಲ್ಲಿ ನಡೆಯುವ ದೌರ್ಜನ್ಯ ಹಾಗೂ ಅವುಗಳನ್ನು ತಡೆಯುವ ಬಗ್ಗೆ ಮಾಹಿತಿ ನೀಡುವದರ ಜೊತೆಗೆ ಅವುಗಳನ್ನು ಎದುರಿಸುವ ಕಲೆಯನ್ನು ತಿಳಿಸಿದರು. 

     ಮುಳಗುಂದ ಪಿಎಸ್ಆಯ್ ಎಚ್.ಎಸ್. ನಡುಗಡ್ಡಿ, ಪ್ರೊಬೇಶನರಿ ಪಿಎಸ್ಆಯ್ ಲಕ್ಷ್ಮಪ್ಪ ಆರಿ, ಪ್ರೌಢ ಶಾಲೆ ಮುಖ್ಯೋಪಾದ್ಯಾಯ ಎನ್.ಪಿ. ಲಮಾಣಿ, ಶಿಕ್ಷಕ ಆರ್.ಆರ್. ಪಟ್ಟಣ ಹಾಗೂ ಪೋಲೀಸ್ ಹಾಗೂ ಶಿಕ್ಷಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. 

ಮುಳಗುಂದ ಪಟ್ಟಣದ ಎಸ್ಜೆಜೆಎಂ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳಿಗೆ ಕನರ್ಾಟಕ ಪೋಲೀಸ ಇಲಾಖೆಯಿಂದ ಚನ್ನಮ್ಮ ಪೋಲೀಸ ಪಡೆ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಗದಗ ಗ್ರಾಮೀಣ ಸಿಪಿಆಯ್ ಶಿದ್ದಲಿಂಗಪ್ಪಗೌಡ ಪಾಟೀಲ ಮಾತನಾಡಿದರು. ಮುಳಗುಂದ ಪಿಎಸ್ಆಯ್ ಎಚ್.ಎಸ್. ನಡುಗಡ್ಡಿ, ಪ್ರೊಬೇಶನರಿ ಪಿಎಸ್ಆಯ್ ಲಕ್ಷ್ಮಪ್ಪ ಆರಿ, ಪ್ರೌಢ ಶಾಲೆ ಮುಖ್ಯೋಪಾದ್ಯಾಯ ಎನ್.ಪಿ. ಲಮಾಣಿ, ಶಿಕ್ಷಕ ಆರ್.ಆರ್. ಪಟ್ಟಣ ಭಾಗವಹಿಸಿದ್ದರು.