ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಹಾಗೂ ಆಯ್ಕೆ ಶಿಬಿರ ಕಾರ್ಯಕ್ರಮ


ಲೋಕದರ್ಶನ ವರದಿ

ಬ್ಯಾಡಗಿ30: ಕುಟುಂಬಸ್ಥರಿಂದ ನಿರ್ಲಕ್ಷಿತ ಬಹುತೇಕ ವಿಕಲಚೇತನರು ಬದುಕಿನ ನಿರ್ವಹಣೆಗೆ ಭಿಕ್ಷಾಟನೆ ಆಯ್ಕೆ ಮಾಡಿಕೊಳ್ಳುತ್ತಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ, ಅಲ್ಲದೇ ಇತ್ತೀಚೆಗೆ ಖೊಟ್ಟಿ ದಾಖಲೆ ಸೃಷ್ಟಿಸಿಕೊಂಡು ವಿಕಲಚೇತನರಿಗೆ ಸಕರ್ಾರದಿಂದ ಬರುವಂತಹ ಸೌಲಭ್ಯಕ್ಕೂ ಕೆಲವರು ಕೈ ಹಾಕಿದ್ದು ನಿಮ್ಮ ಅಕ್ಕಪಕ್ಕದಲ್ಲಿಯೇ ಇರುವ ಅಂತಹವರ ಬಗ್ಗೆ ತೀವ್ರ ನಿಗಾ ವಹಿಸುವಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕರೆ ನೀಡಿದರು.

 ಕಳೆದ ದಿನ ತಾಲೂಕಾ ಪಂಚಾಯತ್ ಆವರಣದಲ್ಲಿ ನಿರುದ್ಯೋಗಿ ವಿಕಲಚೇತನ ಯುವಕ/ಯುವತಿರಿಗಾಗಿ ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ದಿ.ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೇಬಲಿಟಿ ದಾವಣಗೆರೆ (ಎಪಿಡಿಸಂಸ್ಥೆ), ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತರಬೇತಿ ಮತ್ತು ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ವಿಕಲಚೇತರನ್ನು ನೋಡಿ ಅನುಕಂಪ ತೋರಿಸುವ ಬದಲು ಸೂಕ್ತ ಅವಕಾಶ ಕಲ್ಪಿಸಿಕೊಡಿ ಅದನ್ನು ಬಿಟ್ಟು ಅವರಿಗಾಗಿಯೇ ಮೀಸಲಾಗಿರುವ ಮಾಶಾಸನ, ಉಚಿತ ಬಸ್ಪಾಸ್ ಇನ್ನಿತರ ಸೌಲಭ್ಯಗಳನ್ನು ಕಸಿಯಲಾಗುತ್ತಿದೆ, ಸಮಾಜದಲ್ಲಿ ವಿಕಲಚೇತರಿಗಾಗಿ (ದಿವ್ಯಾಂಗ) ಸಕರ್ಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸಬ್ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ನಡೆಸುವಂತೆ ಕರೆ ನೀಡಿದರು.

 ಜಿಲ್ಲಾ ಹಿರಿಯ ನಾಗರಿಕರ ಮತ್ತು ವಿಕಲಚೇತನ ಕಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ ಮಾತನಾಡಿ, ಸಕರ್ಾರದ 32 ಇಲಾಖೆಗಳಲ್ಲಿ ವಿಕಲಚೇತನರಿಗಾಗಿ ಶೇ.3 ರಷ್ಟು ಅನುದಾನವನ್ನು ಮೀಸಲಾಗಿಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ತ್ರಿಚಕ್ರ ವಾಹನ ವಿತರಣೆ, ವಸತಿ ಯೋಜನೆ, ಶೂನ್ಯ ಬಡ್ಡಿ ದರದಲ್ಲಿ ಸಾಲ, ಸ್ವಉದ್ಯೋಗಕ್ಕಾಗಿ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳನ್ನು ವಿಕಲಚೇತನರಿಗೆ ನೀಡುತ್ತಿದೆ, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

 ಎಪಿಡಿ ಸಂಸ್ಥೆಯ ಸಮನ್ವಯಾಧಿಕಾರಿ ಶ್ರೀಧರ ಪಾಟೀಲ ಮಾತನಾಡಿ, ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ವಿಕಚೇತನರಿಗಾಗಿ ಮತ್ತು ಅವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು ಇಗಾಗಲೆ ಹಲವಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು. ವಿಜಯ ಬ್ಯಾಂಕ್ ಸ್ವಉದ್ಯೋಗ ಸಮನ್ವಯಾಧಿಕಾರಿ ಮಾಲತೇಶ ಮ್ಯಾಗೇರಿ ಮಾತನಾಡಿ, ಬ್ಯಾಂಕ್ ವಿಕಲಚೇತನರಿಗಾಗಿ ವರ್ಷಪೂತರ್ಿ ನೀಡುತ್ತಿರುವ ತರಬೇತಿಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

 ಶಿಕ್ಷಣ ಸಂಯೋಜಕ ಜೀವರಾಜ ಛತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ದೈಹಿಕ ಅಂಗವಿಕಲತೆಯಿದ್ದರೂ ಕೂಡಾ ಅಸಾಧ್ಯ ಸಾಧನೆ ಮಾಡಿದ ಹಲವರಿದ್ದಾರೆ ಇದರಲ್ಲಿ ಖಗೋಳ ವಿಜ್ಞಾನಿ ಸ್ಟೀಫನ್ ಹಾಂಕಿಂಗ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಅವರ ಬುದ್ದಿಮತ್ತೆಯನ್ನು ಹಲವಾರು ವರ್ಷಗಳ ಕಾಲ ಈಡೀ ಜಗತ್ತೆ ಯಾವುದೇ ಬೇಧ ಭಾವವಿಲ್ಲದೇ ಒಪ್ಪಿಕೊಂಡಿದ್ದೇ ಇದಕ್ಕೆ ಸಾಕ್ಷಿ ಎಂದರು. 

 ವೇದಿಕೆಯಲ್ಲಿ ತಾಲೂಕಾಧ್ಯಕ್ಷ ಪಾಂಡು ಸುತಾರ, ಉಪಾಧ್ಯಕ್ಷ ಗಣೇಶ ಬಡಿಗೇರ, ಗೌರವಾಧ್ಯಕ್ಷ ಬಸವರಾಜ ಬಸಣ್ಣನವರ, ಮುಖಂಡರಾದ ಶಿವಬಸಪ್ಪ ಕುಳೇನೂರ, ವಿರೇಂದ್ರ ಶೇಟ್ಟರ, ವೀರಭದ್ರಪ್ಪ ಹೊಮ್ಮರಡಿ, ಸಿದ್ಧಲಿಂಗಪ್ಪ ಬಡ್ಡಿ, ಜಗದೀಶ ಕಿರವಾಡಿ, ರುದ್ರಪ್ಪ ಕಮ್ಮಾರ, ನಾಗರಾಜ ಅಗಸನಹಳ್ಳಿ, ಪುನರ್ವಸತಿ ಕಾರ್ಯಕರ್ತರು ಎಪಿಡಿ ಸಂಸ್ಥೆಯ ಟಿ.ಪುಷ್ಪಾವತಿ, ರಾಮಾಂಜನೇಯ ಸೇರಿದಂತೆ ಇನ್ನಿತರರು ಉಸಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ವೀರಭ್ರದಪ್ಪ ಶಿಡೇನೂರ ಸ್ವಾಗತಿಸಿದರು. ಜೀವರಾಜ ಛತ್ರದ ನಿರೂಪಿಸಿದರು. ಪಾಂಡುರಂಗ ಸುತಾರ ವಂದಿಸಿದರು.