ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ ಸದಸ್ಯರಿಗೆ ಜರುಗಿದ ತರಬೇತಿ ಕಾರ್ಯಾಗಾರ

Training Workshop conducted for District Legal Services Authority Committee Members

ಧಾರವಾಡ ಫೆ. 03: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ  ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಘಟಕ ಯೋಜನೆ-2024 ಸಮಿತಿಯ (ಅಟಜ ಈಡಿಜಟಿಜಟಥಿ ಐಜರಚಿಟ ಖಜಡಿತಛಿ ಗಟಿಣ ಜಿಠ ಅಟಜಡಿಜಟಿ ಖಛಿಜಟಜ-2024)  ಹಾಗೂ ಮಾನಸಿಕ ಅನಾರೋಗ್ಯ ಮತ್ತು ಬೌದ್ಧಿಕ ವಿಕಲತೆಗಳ ಕಾನೂನು ಸೇವಾ ಯೋಜನೆ  (ಐಜರಚಿಟ ಖಜಡಿತಛಿ ಣಠ ಕಜಢಿಠ ತಿಣ ಒಜಟಿಣಚಿಟ ಋಟಟಿ ಚಿಟಿಜ ಕಜಢಿಠ ತಿಣ ಋಣಜಟಟಜಛಿಣಣಚಿಟ ಆಚಿಛಟಣ ಖಛಿಜಟಜ-2024)ಗಳ ಕುರಿತು ರಚಿಸಿದ ಸಮಿತಿಯ ಸದಸ್ಯರಿಗೆ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಎ.ಡಿ.ಆರ್ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಆಯೋಜಿಸಲಾಗಿತ್ತು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪ್ರಭಾರ ಅಧ್ಯಕ್ಷರು ಹಾಗೂ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ರಾಜಕುಮಾರ ಸಿ. ಅವರು ಕಾರ್ಯಗಾರವನ್ನು ಉದ್ಘಾಟಿಸಿದರು.  

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್‌. ದೊಡ್ಡಮನಿ, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಆರ್‌.ಡಿ. ರೇಣಕೆ, ಬಿ.ಎಸ್‌.ಚಿಗರೆಡ್ಡಿ ಹಾಗೂ ಡಿ.ವಿ.ಪಾಟೀಲ್ ಅವರು ವೇದಿಕೆಯಲ್ಲಿದ್ದರು.  

ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಮ್‌.ಬಿ.ಸಣ್ಣೇರಿ, ಅಂಗವಿಕಲ ಅಧಿಕಾರಿ ಜಗದೀಶ ಕೆ., ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ್, ಡಿಮಾನ್ಸನ ವೈದ್ಯಕೀಯ ಅಧೀಕ್ಷಕ ರಾಘವೇಂದ್ರ ನಾಯ್ಕ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಂಗೀತಾ ಆರ್‌. ಮಾನೆ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ರಾಧಾ ಕಲಾಲ, ರಾಯಪೂರದ ನಿರಾಶ್ರಿತರ ಕೇಂದ್ರ ಅಧೀಕ್ಷೆ ನಂದಾ ಹುರಳಿ ಭಾಗವಹಿಸಿದ್ದರು.  

ಮಹಮ್ಮದ ಅಲಿ ತಹಸೀಲ್ದಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿಶಾಲಾ ಖಾನಪೇಟ್ ವಂದಿಸಿದರು ಎಂದು ಪ್ರಕಟಣೆ ತಿಳಿಸಿದೆ.