ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ

ಲೋಕದರ್ಶನ ವರದಿ

ಯಮಕನಮರಡಿ 04: ಸಮೀಪದ ಹಿಡಕಲ್ ಡ್ಯಾಮಿನ ಸರಕಾರಿ ಉರ್ದು  ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಅಕ್ಷರ ದಾಸೋಹ ಯೋಜನೆ ತಾಲೂಕಾ ಪಂಚಾಯತ ಹುಕ್ಕೇರಿ ಇವರ ಆಶ್ರಯದಲ್ಲಿ ಅಡುಗೆ ಸಿಬ್ಬಂದಿಯವರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು. ಹೂಸೂರ ತಾ ಪಂ ಸದಸ್ಯ ಬಾಳಪ್ಪ ಅಕ್ಕತಂಗೇರಹಾಳ ಸಸಿಗೆ ನೀರು ಹಾಕುವುದರ ಮೂಲಕ ತರಬೇತಿಗೆ ಚಾಲನೆ ನೀಡಿದರು. 

ಯರಗಟ್ಟಿ ಕೆ ಎಚ್ ಪಿ ಎಸ್ ಶಾಲೆಯ ಪ್ರಧಾನ ಗುರುಗಳಾದ ಎಸ್ ಎ ಸರಿಕರ ಮಾತನಾಡಿ ಅಡುಗೆ ತಯಾರಿಕೆಯಲ್ಲಿ ಸಿಬ್ಬಂದಿಯವರ ಪ್ರಮಾಣಿಕತೆ ಮುಖ್ಯವಾಗಿದ್ದು, ಈ ಸಿಬ್ಬಂದಿಯವರಿಗೆ ಗೌರವ ಧನ ಹೆಚ್ಚಳವಾಗಬೇಕೆಂದು ಸಂಘಟನೆ ಮೂಲಕ ಸರಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ. 

ಅಡುಗೆ ಸಿಬ್ಬಂದಿ ವರ್ಗದವರು ಶಾಂತಿಯುತವಾಗಿ ಹೋರಾಟ ಮಾಡಿ ತಮ್ಮ ಗೌರವಧನ ಹೆಚ್ಚಳ ಮಾಡಲು ಸರಕಾರದ ಗಮನ ಸೆಳೆಬೇಕೆಂದು ಹೇಳಿದರು. ಮುಖ್ಯಾಧ್ಯಾಪಕ ಎಮ್ ಎಲ್ ಮಗದುಮ್ಮ ಮಾತನಾಡಿದರು, ಗುಡುಸ ಸರಕಾರಿ ಶಾಲೆಯ ಎಸ್ ಡಿ.ಎಮ್.ಸಿ ಅಧ್ಯಕ್ಷ ಅಡಿವೆಪ್ಪಾ ಪಾಟೀಲ ತರಬೇತಿ ನೀಡಿದರು, ಕಾರ್ಯಕ್ರದಲ್ಲಿ ಸಿ.ಆರ್.ಪಿ ಗಳಾದ ಎ.ವ್ಹಿ.ಕುಂಬಾರ, ಎನ್.ಎಸ್ ದೇವರಮನಿ, ಪ್ರಧಾನ ಗುರುಗಳಾದ ರಮೇಶ ಮೇದಾರ, ಎಮ್ ಡಿ ಮಗದುಮ್ಮ, ಸಿಆರ್ಪಿ, ಎಸ್ ಬಿ ಶಿಂಗೆ, ಎಸ್.ಎನ್.ಪತ್ತಾರ, ಸಿ.ವಾಯ್.ಕರೆನ್ನವರ, ವಿ.ಪಿ.ಲಗಮನ್ನವರ, ಬಸವರಾಜ ಹಾಗೂ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು ಕೊನೆಯಲ್ಲಿ ಎಸ್ ಬಿ ಶಿಂಗೆ ವಂದಿಸಿದರು.