ಬಾಗಲಕೋಟೆ: ಸರಕು ಸಾಗಾಣಿಕೆ ಮತ್ತು ಕಟ್ಟಡ ನಿಮರ್ಾಣಕ್ಕೆ ಉಪಯೋಗಿಸುತ್ತಿರುವ ವಾಹನಗಳಲ್ಲಿ, ಟ್ರ್ಯಾಕ್ಟರ್ ಟ್ರೇಲರ್ಸ್ಗಳಲ್ಲಿ ಕಾಮರ್ಿಕರನ್ನು, ಸಾರ್ವಜನಿಕರನ್ನು ಸಾಗಿಸುತ್ತಿರುವುದು ಕಾನೂನು ಬಾಹಿರವಾಗಿದ್ದು, ಸಾಗಿಸುತ್ತಿರುವುದು ಕಂಡುಬಂದಲ್ಲಿ ವಾಹನ ನೋಂದಣಿ ಹಾಗೂ ಚಾಲಕನ ಲೈಸನ್ಸ್ ರದ್ದುಗೊಳಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟೆಯಲ್ಲಿ ತಿಳಿಸಿದ ಅವರು ಶಾಲಾ ವಿದ್ಯಾಥರ್ಿಗಳನ್ನು ಸಹ ನಿಗದಿತ ಆಸನ ಸಾಮಥ್ರ್ಯಕ್ಕಿಂತ ಹೆಚ್ಚಿಗೆ ಸಾಗಿಸುತ್ತಿರುವುದು ಮತ್ತು ಆಟೋರಿಕ್ಷಾಗಳಲ್ಲಿ 6 ಜನ ವಿದ್ಯಾರ್ಥಿಗಳನ್ನು ಮಾತ್ರ ಸಾಗಿಸಬೇಕಾಗಿದ್ದು, ಹೆಚ್ಚಿನ ವಿದ್ಯಾಥರ್ಿಗಳನ್ನು ಸಾಗಿಸುತ್ತಿರುವುದು ನಿಯಮಬಾಹಿರವಾಗಿರುತ್ತದೆ. ಒಂದು ವೇಳೆ ಆಕಸ್ಮಿಕವಾಗಿ ಅಪಘಾತ ಸಂಭವಿಸಿದಲ್ಲಿ ವಿಮಾ ಪರಿಹಾರ ಕೂಡ ನೀಡಲಾಗುವುದಿಲ್ಲ. ವಾಹನ ಮಾಲಿಕರೇ ಪರಿಹಾರವನ್ನು ನೀಡಬೇಕಾಗುತ್ತದೆ.
ವಾಹನ ಚಾಲನೆ ಮಾಡುವಾಗ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಚಾಲನೆ ಸಮಯದಲ್ಲಿ ಮೊಬೈಲ್ ಬಳಸಬಾರದು. ಮಧ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಅಪ್ರಾಪ್ತ ವಯಸ್ಕರ ವಾಹನವನ್ನು ಚಲಾಯಿಸದಂತೆ ಪೋಷಕರು ನಿಗಾವಹಿಸುವುದು, ಟ್ಯಾಕ್ಟರ ಟ್ರೇಲರ್ಗಳಿಗೆ ರಿಪ್ಲೇಕ್ಟರ ಟೇಪ್ ಅಚಿಟಿಸುವುದು, ಟೇಪ್ ರಿಕಾರ್ಡರ್ ಬಳಸದಂತೆ ಹಾಗೂ ಸಾರ್ವಜನಿಕರು ಚಾಲ್ತಿಯಲ್ಲಿರುವ ತಮ್ಮ ವಾಹನದ ಎಲ್ಲ ದಾಖಲೆಗಳು ವಾಹನದಲ್ಲಿ ಇರುವಂತೆ ನೋಡಿಕೊಳ್ಳಬೇಕು.
ಉಚ್ಛ ನ್ಯಾಯಾಲಯವು ಕಾನೂನು ಬಾಹಿರವಾಗಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ.
ಆದ್ದರಿಂದ ಸರಕು ಸಾಗಾಣಿಕೆ ವಾಹನ ಮಾಲಿಕರು, ಶಾಲಾ ವಿದ್ಯಾಥರ್ಿಗಳನ್ನು ಸಾಗಿಸುತ್ತಿರುವ ವಾಹನ ಮಾಲಿಕರು, ಚಾಲಕರು ಕಾನೂನನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ವಿಶೇಷ ತನಿಖೆ ತಂಡವನ್ನು ನಿಯೋಜಿಸಿ ವಾಹನ ತಪಾಸಣೆಗಳನ್ನು ಮಾಡಲಾಗುತ್ತಿದ್ದು, ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ವಾಹನ ಮಾಲಿಕರ, ಚಾಲಕರ ವಿರುದ್ದ ಕ್ರಮಕೈಗೊಳ್ಳಲಾಗುವುದು. ಅಲ್ಲದೇ ರಹದಾರಿ, ನೋಂದಣಿ ಪತ್ರ ಅಥವಾವಾಹನ ಚಾಲಕರ ಲೈಸನ್ಸ್ ರದ್ದುಗೊಳಿಸಲಾಗುವುದೆಂದು ತಿಳಿಸಿದ್ದಾರೆ.
ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗುವ ಸುರಕ್ಷಿತ ಸಾರಿಗೆ ವ್ಯವಸ್ಥೆ ಆಯಾ ಶಾಲಾ ಮುಖ್ಯಸ್ಥರು ವಹಿಸಬೇಕು.
ಕಾಖರ್ಾನೆಯ ಕಾಮರ್ಿಕರನ್ನು ಸಾಗಿಸುವುದು ಕಾರ್ಖಾನೆಯ ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ. ಸಾರ್ವಜನಿಕರು ಸಹ ಸುರಕ್ಷತೆ ದೃಷ್ಠಿಯಿಂದ ನಿಯಮವನ್ನು ಪಾಲಿಸುವಂತೆ ಸಹಕರಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ. ಏಪ್ರೀಲ್ 1 ರಿಂದ ಜುಲೈ 2019 ವರೆಗೆ ವಿವಿಧ 119 ವಾಹನಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ 79 ನೋಂದಣಿ ಪತ್ರ ಹಾಗೂ 100 ಚಾಲನಾ ಅನುಜ್ಞಾ ಪತ್ರಗಳನ್ನು ಅಮಾನತ್ತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.