ಲೋಕದರ್ಶನ ವರದಿ
ಕಾಗವಾಡ: ಕೃಷ್ಣಾ ನದಿ ನೀರಿನ ರಭಸಕ್ಕೆ ಉಗಾರ-ಕುಡಚಿ ಮಧ್ಯದ ಕೃಷ್ಣಾ ನದಿ ಮೇಲಿನ ಸೇತುವೆಯ ಎರಡು ದಡಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ಸೇತುವೆ ಮೇಲಿನ ನೀರು ಇಳಿಮುಖವಾದರೂ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಳೇದ 20 ದಿನಗಳಿಂದ ಕುಡಚಿ ಸೇತುವೆ ನೀರಿನಲ್ಲಿ ಮುಳುಗಿದೆ. ಸುಮಾರು 10 ಅಡಿ ನೀರು ಸೇತುವೆ ಮೇಲಿಂದ ಹರಿದು ಹೋಗಿದ್ದರಿಂದ ಎರಡು ದಡಿಗಳ ರಸ್ತೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸೇತುವೆ ಮೇಲಿಂದ ಸಂಚಾರಿಸಲು ವಾಹನಧಾರಕರಿಗೆ ಅಪಾಯಕಾರಿವಾಗಿದೆ. ಇದರಿಂದ ಸಂಚಾರ ಸೇವೆ ಕಡಿತಗೊಳಿಸಲಾಗಿದೆ.
ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ, ಕುಡಚಿ ಪಿಎಸ್ಐ ಮತ್ತು ಸಿಬ್ಬಂದಿಗಳು ಸೇತುವೆ ಮೇಲೆ ಉಳಿದು ಭಾರೀ ತೂಕದ ವಾಹನಗಳು ಸೇತುವೆ ಮೇಲಿಂದ ಸಂಚಾರಿಸಲು ನಿಷೆೇಧಿಸಲಾಗಿದೆ.
ಕೆಲ ಬೈಕ್ಗಳು ಮಾತ್ರ ಸಂಚಾರಿಸುತ್ತಿವೆ. ಕಳೇದ 20 ದಿನಗಳ ನಂತರವು ಈ ಮಾರ್ಗದ ಸೇತುವೆಯಿಂದ ಸಂಚಾರಿಸಲು ವಾಹನಧಾರಕರಿಗೆ ಅನಾನುಕೂಲತೆಯಾಗಿದೆ.