ವಿದ್ಯಾರ್ಥಿಗಳಿಂದ ಸಂಚಾರಿ ನಿಯಮ ಜಾಗೃತಿ

ಲೋಕದರ್ಶನ ವರದಿ

ಬೆಳಗಾವಿ 15: ನಗರದ ಜೈನ್ ಹೆರಿಟೇಜ್ ಶಾಲೆ ವಿದ್ಯಾಥರ್ಿಗಳು ವಿವಿಧೆಡೆ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಸಂಚಾರಿ ನಿಯಮ ಕುರಿತು ಜಾಗೃತಿ ಮೂಡಿಸಿದರು.

ನ. 17ರಂದು ನಡೆಯಲಿರುವ ಸಂಚಾರ ನಿಯಮ ದಿನಾಚರಣೆ ಅಂಗವಾಗಿ ಕಳೆದ ಹಲ ದಿನಗಳಿಂದ ನಿತ್ಯ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ತಮ್ಮ ವಾಹನಗಳ ವಿಮಾ ಪಾಲಿಸಿ ನವೀಕರಿಸಿಕೊಳ್ಳಬೇಕು. ವಾಹನ ಚಾಲನಾ ಲೈಸನ್ಸ್ ಪಡೆಯಬೇಕು ಎಂಬುದು ಸೇರಿದಂತೆ ಸುರಕ್ಷಿತ ವಾಹನ ಸಂಚಾರಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.

ಪೊಲೀಸ್ ಇಲಾಖೆ ಸಹಕಾರದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜೈನ್ ಶಿಕ್ಷಣ ಇಲಾಖೆ ಆಡಳಿತ ಮಂಡಳಿ, ನಿದರ್ೇಶಕ ಎಂ.ಎಸ್. ಶ್ರದ್ಧಾ ಖತವಾಟೆ, ಪ್ರಾಂಶುಪಾಲ ಡಾ. ಮಂಜೀತ್ ಜೈನ್, ಮುಖ್ಯ ನಿರ್ವಹಣಾಧಿಕಾರಿ ಅಮೀ ಧೋಸಿ, ಪಲ್ಲವಿ ನಾಡ್ಕಣರ್ಿ, ಅಕ್ಷಯ ವಾಡ್ಕರ್ ಮತ್ತಿತರರು ಪಾಲ್ಗೊಂಡಿದ್ದರು.