ಲೋಕದರ್ಶನ ವರದಿ
ಬೆಳಗಾವಿ, 12: ನಗರದ ಗೋವಾವೇಸ್ ಜಕ್ಕೇರಿ ಹೋಂಡಾದ "ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಗುಡ್ ಶೆಪರ್ಡ ಪದವಿ-ಪೂರ್ವ ವಿಜ್ಞಾನ ಮಹಾವಿದ್ಯಾಯದ ಸಂಯುಕ್ತ ಆಶ್ರಯದಲ್ಲಿ ಸಾಂಪ್ರದಾಯಿಕ ದಿನ (ಖಿಡಿಚಿಜಣಠಟಿಚಿಟ ಆಚಿಥಿ) ಕಾರ್ಯಕ್ರಮವನ್ನು ಶನಿವಾರ ದಿನಾಂಕ 12/01/2019 ರಂದು ನಾಯ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಸಿ. ನಾಯ್ಕರ ಉದ್ಘಾಟಿನೆಯೊಂದಿಗೆ ಚಾಲನೆ ನೀಡಿದರು.
ಅವರು ಮಾತನಾಡುತ್ತಾ, ಭಾರತೀಯ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಕಾರ್ಯಕ್ರಮವನ್ನು ಅತಿ ವಿಜೃಂಭನೆಯಿಂದ ಆಚರಿಸಲು ಎರಡು ಮಹಾವಿದ್ಯಾಲದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಿಸಿ ಸಲಹೆ ನೀಡಿದರು.
ಕಾರ್ಯಕ್ರಮವು ಆರ್.ಪಿ.ಡಿ ವೃತ್ತದಿಂದ ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾಗಿ ರವೀಂದ್ರನಾಥ ಠಾಗೋರ ಪದವಿ-ಪೂರ್ವ ಮಹಾವಿದ್ಯಾಲಯದಯದ ವರೆಗೆ ಕೊನೆಗೊಂಡಿತು, ಕಾರ್ಯಕ್ರಮದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ ಹಾಗೂ ಹಳ್ಳಿಯ ಸೊಬಗಿನ ರೀತಿಯಲ್ಲಿ ಉಡುಪುಗಳೊಂದಿಗೆ ಸುಮಾರು 500 ಕ್ಕಿಂತಲು ಹೆಚ್ಚಿನ ವಿದ್ಯಾಥರ್ಿ ಹಾಗೂ ವಿದ್ಯಾಥರ್ಿನಿಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಸಿ.ಎನ್.ನಾಯ್ಕರ ಮತ್ತು ಶ್ರೀ.ಎಮ್.ಎಮ್. ಮುಲ್ತಾನಿ ಹಾಗೂ ಶಿಕ್ಷಕ-ಶಿಕ್ಷೇತರ ವೃಂದದವರು ಭಾಗವಹಿಸಿದ್ದರು.