ಬಾಬರ್‌, ಔರಂಗಜೇಬನ ಸಂಪ್ರದಾಯ ಮರೆಯಾಗಲಿದೆ : ಸಿಎಂ ಯೋಗಿ

Tradition of Babur, Aurangzeb will disappear: CM Yogi

ಲಕ್ನೋ 17: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ತಮ್ಮ ಭಾಷಣದ ಮೂಲಕ ವಿವಾದವನ್ನು ಎಬ್ಬಿಸಿದ್ದಾರೆ. ರಾಮ, ಕೃಷ್ಣ ಮತ್ತು ಬುದ್ಧನ ಸಂಪ್ರದಾಯಗಳು ಭಾರತದಲ್ಲಿ ಉಳಿಯುತ್ತವೆ, ಆದರೆ ಬಾಬರ್ ಮತ್ತು ಔರಂಗಜೇಬ್ ಪರಂಪರೆಗಳು ಮರೆಯಾಗುತ್ತವೆ ಎಂದು ಸಿಎಂ ಹೇಳಿದರು. 


ವರದಿಗಳ ಪ್ರಕಾರ, ಘೋಷಣೆಗಳನ್ನು ಕೂಗುವುದು ಮತ್ತು ಹಿಂದೂ ರ್ಯಾಲಿಗಳನ್ನು ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಾದುಹೋಗಲು ಅವಕಾಶ ನೀಡುವುದು ಕೋಮು ಹಿಂಸಾಚಾರವನ್ನು ಪ್ರಚೋದಿಸುತ್ತದೆ ಎಂಬ ವಿರೋಧ ಪಕ್ಷದ ಸಲಹೆಯನ್ನು ಉಲ್ಲೇಖಿಸಿ ಅವರು ಈ ಟೀಕೆಗಳನ್ನು ಮಾಡಿದ್ದಾರೆ.


ಮುಸ್ಲಿಂ ಪ್ರಾಬಲ್ಯದ ಪ್ರದೇಶದಲ್ಲಿ ಹಿಂದೂಗಳು ಮೆರವಣಿಗೆ ಮಾಡಬಾರದು ಎಂದು ಸಂವಿಧಾನದಲ್ಲಿ ಎಲ್ಲಿ ಉಲ್ಲೇಖಿಸಲಾಗಿದೆ ಎಂದು ಯೋಗಿ ಪ್ರಶ್ನಿಸಿದ್ದಾರೆಮಸೀದಿಯ ಮುಂಭಾಗದಿಂದ ಹಾದು ಹೋಗಲು ಹಿಂದೂಗಳ ಮೆರವಣಿಗೆಗೆ ಅವಕಾಶ ನೀಡಬಾರದು ಎಂಬ ಅಭಿಪ್ರಾಯ ಕೇಳಿ ನಾನು ಅಚ್ಚರಿಗೊಂಡಿದ್ದೇನೆ ರಸ್ತೆಗಳು ಯಾರಿಗೆ ಸೇರಿವೆಇದು ಸಾರ್ವಜನಿಕ ರಸ್ತೆನೀವು ಅವರನ್ನು ಹೇಗೆ ತಡೆಯುತ್ತೀರಿಎಂದು ಸಿಎಂ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಇತ್ತೀಚೆಗೆ ಬಹ್ರೈಚ್‌ ನಲ್ಲಿ ನಡೆದ ಘಟನೆಯನ್ನು ಉದಾಹರಿಸಿದ ಸಿಎಂ ಯೋಗಿ, ಸಾಂಪ್ರದಾಯಿಕ ಮೆರವಣಿಗೆಗೆ ಎಲ್ಲಾ ಸಿದ್ಧತೆ ನಡೆಸಿದ್ದರೂ, ಅದನ್ನು ತಡೆದು ನಿಲ್ಲಿಸಲಾಗಿತ್ತು. ಅಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದರಿಂದ ಮೆರವಣಿಗೆಗೆ ಅವಕಾಶ ನೀಡಿಲ್ಲ ಎನ್ನುವುದಾದರೆ, ಜೈ ಶ್ರೀರಾಮ್‌ ಎಂಬುದು ಪ್ರಚೋದನೆಕಾರಿಯೇ? ಇದು ನಮ್ಮ ಭಕ್ತಿ ಮತ್ತು ನಂಬಿಕೆಯ ಪ್ರತೀಕವಾಗಿದೆ ಎಂದು ಪ್ರತಿಪಾದಿಸಿದರು. ಅವರು ಕೂಡಾ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗುತ್ತಾರೆ…ಒಂದು ವೇಳೆ ನಾನು ಅಲ್ಲಾಹು ಅಕ್ಬರ್‌ ಘೋಷಣೆ ನನಗೆ ಇಷ್ಟವಿಲ್ಲ ಎಂದು ಹೇಳಿದರೆ, ನೀವು ಅದನ್ನು ಒಪ್ಪಿಕೊಳ್ಳುವಿರಾ ಎಂದು ಸಿಎಂ ಯೋಗಿ ಪ್ರಶ್ನಿಸಿದ್ದಾರೆ.