ಜೊಯಿಡಾ ಗಣೇಶಗುಡಿ ಬಳಿ ಪ್ರವಾಸಿ ಬಸ್ ಪಲ್ಟಿ: 40 ವಿದ್ಯಾರ್ಥಿಗಳಿಗೆ ಗಾಯ
ಕಾರವಾರ 08 : ಜೊಯಿಡಾ ತಾಲ್ಲೂಕಿನ ಗಣೇಶಗುಡಿ ಬಳಿ ಪ್ರವಾಸಿ ಬಸ್ ಪಲ್ಟಿ ಯಾದ ಘಟನೆ ನಡೆದಿದೆ. ಬಸ್ ಚಿತ್ರದುರ್ಗ ಜಿಲ್ಲೆಯ ಹೊಸನಗರದ ಸೇಂಟ್ ಅಂಟೋನಿ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಕರೆ ತಂದಿತ್ತು. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ರಾಜ್ಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ.40 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ರಾಮನಗರ (ಜೊಯಿಡಾ) ಪಿಎಸ್ ಐ ಬಸವರಾಜ ತಿಳಿಸಿದ್ದಾರೆ. ವಿದ್ಯಾರ್ಥಿಗಳನ್ನು ದಾಂಡೇಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಣೇಶ ಗುಡಿಗೆ ವಿದ್ಯಾರ್ಥಿಗಳು ರಾಫ್ಟಿಂಗ್ ಮಾಡಲು ಬರುತ್ತಿದ್ದಾಗ ಬಸ್ ಪಲ್ಟಿಯಾಗಿದೆ.ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆಂದು ಪಿಎಸ್ ಐ ಬಸವರಾಜ ಹೇಳಿದ್ದಾರೆ......