ಸಂಸ್ಕೃತಿ ವಿನಿಮಯಕ್ಕೆ ಪ್ರವಾಸೋದ್ಯಮ ಪೂರಕ: ಡಾ.ರಾಜೇಂದ್ರ ಕೆ.ವಿ.

ಬೆಳಗಾವಿ, 27: ದೇಶ, ರಾಜ್ಯದ ಭವ್ಯ ಪಂರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗಲು ಪ್ರವಾಸೋದ್ಯಮ ಕ್ಷೇತ್ರವು ಮುಖ್ಯ ಪಾತ್ರವಹಿಸಿದ್ದು,  ಸಂಸ್ಕೃತಿ ವಿನಿಮಯಕ್ಕೆ ಪ್ರವಾಸೋದ್ಯಮವು ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶುಕ್ರವಾರ (ಸೆ.27) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2019 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಬದುಕಿನಲ್ಲಿ ಈಗಿನ ಪಿಳಿಗೆ ನಮ್ಮ ಪರಂಪರೆ, ಆಚಾರ, ಸಂಸ್ಕೃತಿಯನ್ನು ಮರೆಯುತ್ತಿದ್ದು,  ಇವೆಲ್ಲದರ ಮೇಲುಕಿಗೆ ಪ್ರವಾಸೋದ್ಯಮ ಅವಕಾಶ ಒದಗಿಸಿಕೊಡುತ್ತದೆ.

ಪ್ರವಾಸೋದ್ಯಮ ಮತ್ತು ಉದ್ಯೋಗ  ಸರ್ವರಿಗೂ ಉಜ್ವಲ ಭವಿಷ್ಯ  ಎಂಬುದು ವಿಶ್ವ ಪ್ರವಾಸೋದ್ಯಮ ದಿನಾಚರಣೆ-2019ರ ಸಂದೇಶವಾಗಿದೆ.

ಕೆಲ ದೇಶಗಳು ಪ್ರವಾಸೋ ದ್ಯಮದಿಂದಲೆ ಸಾಕಷ್ಟು ಆಥರ್ಿಕ ಸಬಲತೆ ಹೊಂದುತ್ತಿದ್ದು, ಅಗಾಧ ಪ್ರಾಕೃತಿಕ ಸೌಂದರ್ಯ ಹಾಗೂ ಸಂಪನ್ಮೂಲಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಕೂಡ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಇದನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.

ಅತಿಥಿಯಾಗಿ ಆಗಮಿಸಿದ್ದ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿದರ್ೇಶಕರಾದ ಗುರುನಾಥ ಕಡಬೂರ ಅವರು, ಮಾನವನು ಅಭಿವೃದ್ಧಿಯ ಹೊಂದಲು, ವಿಕಾಸದ ಜ್ಞಾನ ಬೆಳಸಿಕೊಳ್ಳಲು ಪ್ರವಾಸದಿಂದ ಮಾತ್ರ ಸಾದ್ಯ. 

ಈಗ ಪ್ರವಾಸ ಮನೋಲ್ಲಾಸದ ಕೇಂದ್ರವಗಿರದೇ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದ್ದು ನಮ್ಮ ಸಂಸ್ಕೃತಿಯ ವಿನಿಮಯಕ್ಕಾಗಿ ಪ್ರವಾಸೋದ್ಯಮದ ರಾಯಭಾರಿಗಳಾಗಿ ಎಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಹೋಟೆಲ್ ಉದ್ಯಮಿ ವಿಠ್ಠಲ್ ಹೆಗಡೆ ಅವರು, ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿ ಸಮರ್ಪಕವಾಗಿ ನಿರ್ವಹಿಸಿದರೆ ಪ್ರವಾಸಿಗರನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕಷರ್ಿಸಬಹುದು ಎಂದರು.

ವಿಶೇಷ ಉಪನ್ಯಾಸ ನೀಡಿದ ರಾಣಿ ಪಾರ್ವತಿದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಎಂ ಮುನವಳ್ಳಿ, ಭಾರತ ಜಗತ್ತಿನಲ್ಲಿ ಅಪರೂಪದ ಪ್ರವಾಸಿ ತಾಣವಾಗಿದ್ದು ಪ್ರತಿ ವರ್ಷ ಸುಮಾರು  30 ಲಕ್ಷ ಜನರು ಭಾರತಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿಸಿದರು.

ಪ್ರವಾಸೋದ್ಯಮದಲ್ಲಿ ಸಾಕಷ್ಟು ಉದ್ಯೋಗ ಅವಕಾಶಗಳಿದ್ದು ಮೂರನೇಯ ದೊಡ್ಡ ಉದ್ಯಮವಾಗಿ ಪ್ರವಾಸೋದ್ಯಮ ಬೆಳೆದಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರವಾಸೋದ್ಯಮ ಇಲಾಖೆಯ ಉಪ ನಿದರ್ೇಶಕರಾದ ಸುಭಾಸ ಎಸ್.ಉಪ್ಪಾರ ಅವರು, ಪ್ರವಾಸೋದ್ಯಮ ಮಾನವ ವಿಕಾಸಕ್ಕೆ ದಾರಿಯಾಗಿದ್ದು ನಾಡಿನ ಸಂಸ್ಕೃತದ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಕನ್ನಡ ನಾಡಿನ ಹೆಮ್ಮೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ 88 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಸಕರ್ಾರ 73 ಕೋಟಿ ಅನುದಾನವನ್ನು ಮಂಜೂರು ಮಾಡಿದ್ದು ಈಗಾಗಲೇ ಪ್ರವಾಸಿತಾಣಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಪರಿಸರದ ಪ್ರವಾಸಿ ತಾಣಗಳ ಪ್ರಾತ್ಯಕ್ಷಿಕೆ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ  ವಿತರಣೆ ಮಾಡಲಾಯಿತು.

ಪ್ರೀತಿ ಪಾಟೀಲ್ ಹಾಗೂ ನಗರದ ಪದವಿ ಮಹಾವಿದ್ಯಾಲಯಗಳ ವಿದ್ಯಾಥರ್ಿ, ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.

ಆರ್.ಪಿ.ಡಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದ ಪ್ರೊ. ಹರೀಶ್ ಕೊಲ್ಕಾರ ನಿರೂಪಿಸಿದರು ಹಾಗೂ ಪ್ರವಾಸಿ ಅಧಿಕಾರಿ ಸೋಮಶೇಖರ್ ಬನವಾಸಿ ಸ್ವಾಗತಿಸಿ, ವಂದಿಸಿದರು.