ಜಿಲ್ಲೆಯಲ್ಲಿ ಒಟ್ಟು 14.99 ಲಕ್ಷ ಮತದಾರರು: ಡಿಸಿ

ಲೋಕದರ್ಶನ ವರದಿ

ಬಾಗಲಕೋಟೆ 16: ಕಳೆದ ಮೂರು ತಿಂಗಳಲ್ಲಿ ನಡೆಸಲಾದ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 14,99,674 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ಹೇಳಿದರು.

   ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂತಿಮ ಮತದಾರರ ಪಟ್ಟಿಯಲ್ಲಿ 750407 ಮಹಿಳಾ ಮತದಾರರು, 749185 ಪುರುಷ ಮತದಾರರು ಹಾಗೂ 82 ಇತರೆ ಮತದಾರರು ಇದ್ದಾರೆ. ಚುನಾವಣಾ ಆಯೋಗದ ನಿದರ್ೇಶನದಂತೆ ಜನವರಿ 1ನ್ನು ಅರ್ಹತಾ ದಿನಾಂಕವನ್ನು ಆಧರಿಸಿ ತಯಾರಿಸಲಾದ ಅಂತಿಮ ಮತದಾರರ ಪಟ್ಟಿಯನ್ನು ಸಂಬಂದಪಟ್ಟ ಮತಗಟ್ಟೆಗಳಲ್ಲಿ, ಗ್ರಾಮ ಲೆಕ್ಕಾಧಿಕಾರಿಗಳ ಕಾಯರ್ಾಲಯ, ತಹಶೀಲ್ದಾರರ ಕಾಯರ್ಾಲಯದಲ್ಲಿ ಪ್ರಕಟಿಸಲಾಗಿದ್ದು, ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು.

   ಅಕ್ಟೋಬರ 10 ರಿಂದ ಡಿಸೆಂಬರ 31 ವರೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪಾರ್ಮ-6ಗೆ 16717 ಅಜರ್ಿಗಳು, ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪಾರ್ಮ-7ಗೆ 18554, ಮಾಪರ್ಾಡು ಮತ್ತು ತಿದ್ದುಪಡಿಗಾಗಿ ಪಾರ್ಮ-8ಗೆ 8511 ಹಾಗೂ ವಗರ್ಾವಣೆಗೆ ಪಾರ್ಮ-8ಎಗೆ 1459 ಅಜರ್ಿಗಳು ಬಂದಿದ್ದವು. ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಮಯದಲ್ಲಿ ಸ್ವೀಕೃತಗೊಂಡ ಅಜರ್ಿಗಳನ್ನು ವಿಲೇವಾರಿ ಮಾಡಲಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಶುದ್ದೀಕರಣದಿಂದ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಅಕ್ಟೋಬರ 1ಕ್ಕೆ ಜಿಲ್ಲೆಯಲ್ಲಿ ಒಟ್ಟು 1657 ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ 1400 ಮತದಾರರು ಹಾಗೂ ಗ್ರಾಮೀಣ ಪ್ರದೇಶದಲ್ಲಿ 1300 ಮತದಾರರಕ್ಕಿಂತ ಹೆಚ್ಚು ಇರುವ ಮತಗಟ್ಟೆಗಳನ್ನು ವಿಂಗಡಣೆ ಮಾಡಲಾಗಿದೆ. ಒಟ್ಟು 62 ಮತಗಟ್ಟೆಗನ್ನು ಹೆಚ್ಚುವರಿ ಸ್ಥಾಪಿಸಲಾಗಿದ್ದು, ಒಟ್ಟು 1719 ಮತಗಟ್ಟೆಗಳು ಇವೆ ಎಂದರು.

   ಜಿಲ್ಲೆಯಲ್ಲಿ ಸೇವಾ ಮತದಾರರು 2199 ಇದ್ದು ಅದರಲ್ಲಿ 2169 ಪುರುಷರು ಹಾಗೂ 30 ಮಹಿಳಾ ಮತದಾರರಿದ್ದಾರೆ. ಚುನಾವಣಾ ಆಯೋಗದ ನಿದರ್ೇಶನದಂತೆ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಮತದಾರರಿಗೆ ಟೋಲ್ ಫ್ರೀ ನಂಬರನ್ನು ಪ್ರಾರಂಭ ಮಾಡಲಾಗಿದ್ದು, ಮತದಾರರು ಸ್ಥಿರ ದೂರವಾಣಿ ಮೂಲಕ ಮಾತ್ರ 1950ಕ್ಕೆ ಕರೆ ಮಾಡಿ ತಮ್ಮ ದೂರುಗಳು ಹಾಗೂ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ. ಮೊಬೈಲ್ ಮೂಲಕ ಕರೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಮತದಾರರ ಪಟ್ಟಿಯಲ್ಲಿ ಭಾವಚಿತ್ರವಿಲ್ಲದೇ ಇರುವ ಮತದಾರರ ಸಂಖ್ಯೆ 5246 ಇದ್ದು, ಈ ಪೈಕಿ ಮುಧೋಳ 2654, ತೇರದಾಳ 413, ಜಮಖಂಡಿ 13, ಬೀಳಗಿ 494, ಬಾದಾಮಿ 1165, ಬಾಗಲಕೋಟ 131 ಹಾಗೂ ಹುನಗುಂದ 376 ಇವೆ ಎಂದರು. 

   ಮತಕ್ಷೇತ್ರವಾರು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರಿನ ಮುಂದೆ ಭಾವಚಿತ್ರವಿಲ್ಲದೇ ಇರುವ ಮತದಾರರು ತಮ್ಮ ಭಾವಚಿತ್ರವನ್ನು ತಹಶೀಲ್ದಾರರ ಕಾಯರ್ಾಲಯಕ್ಕೆ ಅಥವಾ ಸಂಬಂಧಪಟ್ಟ ಬಿ.ಎಲ್.ಓಗಳಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಅಲ್ಲದೇ ಮುಂದಿನ ಪರಿಷ್ಕರಣೆ ಸಮಯದಲ್ಲಿ ಮತದಾರರ ಭಾವಚಿತ್ರವನ್ನು ಅಳವಡಿಸಲಾಗುವುದೆಂದು ತಿಳಿಸಿದರು.