ತಿರುವನಂತಪುರಂ, ಮೇ 22,ಕಳೆದ ಕೆಲವು ದಿನಗಳಿಂದ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಈ ಜಿಲ್ಲೆಯ ಅರುವಿಕ್ಕರ ಅಣೆಕಟ್ಟಿನ ಐದು ಗೇಟುಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ನೀರನ್ನು ಹೊರಹಾಕಲು ನಾಲ್ಕು ಗೇಟುಗಗಳನ್ನು 1.25 ಮೀಟರ್ ಮತ್ತು ಒಂದು ಮೀಟರ್ ವರೆಗೆ ಎತ್ತರಿಸಲಾಗಿದೆ ಎಂದು ಕೇರಳ ಜಲ ಪ್ರಾಧಿಕಾರ (ಕೆಡಬ್ಲ್ಯೂಎ) ಮೂಲಗಳು ಶುಕ್ರವಾರ ತಿಳಿಸಿವೆ.ಕರಮನಾ ನದಿಯ ದಡದಲ್ಲಿ ವಾಸಿಸುವ ಜನರಿಗೆ ನೀರಿನ ಮಟ್ಟ ಏರಿಕೆ, ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.