ಬೈಲಹೊಂಗಲ: ಧಾರಾಕಾರ ಮಳೆ: ಶಾಲಾ ಆವರಣದಲ್ಲಿ ನೀರು

ಲೋಕದರ್ಶನ ವರದಿ

ಬೈಲಹೊಂಗಲ 03:  ತಾಲೂಕಿನ ವಕ್ಕುಂದ ಗ್ರಾಮದ ಸರಕಾರಿ ಮಾದರಿ ಶಾಲೆ ಮುಂಭಾಗದ ಆವರಣದಲ್ಲಿ ನೀರಿನ ಹೊಂಡ ನಿಮರ್ಾಣವಾಗಿದ್ದು, ವಿದ್ಯಾಥರ್ಿಗಳು ನೀರಿನ ಹೊಂಡದಲ್ಲಿ ನೆಂದು ಶಾಲೆಗೆ ತೆರಳುವ ಪರಿಸ್ಥಿತಿ ಬಂದೊದಗಿದೆ. ಅಲ್ಲದೆ ಶಾಲಾ ಕಟ್ಟಡ ಹಳೆಯದಾದ ಶಿಥಿಲಾವಸ್ಥೆಯಲ್ಲಿದ್ದು, ಭಯದ ವಾತಾವರಣದಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 

   ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವದ ಧಾರಾಕಾರ ಮಳೆಗೆ ಶಾಲೆಯ ಮುಂಭಾಗದಲ್ಲಿ ನೀರು ನಿಲ್ಲುತ್ತಿದ್ದು, ಶಾಲಾ ಆಡಳಿತ ಮಂಡಳಿ ನೀರು ಸಾಗುವ ವ್ಯವಸ್ಥೆ ಮಾಡುತ್ತಿಲ್ಲದ್ದರಿಂದ ಮಕ್ಕಳು ಶಾಲಾ ಪ್ರವೇಶಕ್ಕೆ ಪರದಾಡುವಂತಾಗಿದೆ. ಅಲ್ಲದೆ ಕಟ್ಟಡಕ್ಕೆ ಮತ್ತಷ್ಟು ಹಾನಿ ಒದಗುವ ಸಂಭವವಿದೆ.

   ಸುಮಾರು 468 ಕ್ಕು ಹೆಚ್ಚು ವಿದ್ಯಾಥರ್ಿಗಳು ಕಲಿಯುತ್ತಿರುವ ಈ ಶಾಲೆಯಲ್ಲಿ 13 ಜನ ಶಿಕ್ಷಕರಿದ್ದಾರೆ. 14 ಕೊಠಡಿಗಳು ಇವೆ. ಆಟದ ಮೈದಾನವಾಗಿರುವ ಶಾಲಾ ಮುಂಬಾಗದ ಪರಿಸ್ಥಿತಿಯಿಂದ ಮಕ್ಕಳು ನೀರಿನಲ್ಲಿ ಆಟಕ್ಕೀಳಿದು ನೆನೆದು ಅನಾರೋಗ್ಯ ಪಿಡೀತರಾಗುತ್ತಾರೆಂದು ಪಾಲಕರು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿರುವದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಈ ಅವ್ಯವಸ್ಥೆಯನ್ನು ಹೊಗಲಾಡಿಸಿಸಬೇಕು. ನೂತನ ಕಟ್ಟಡದ ವ್ಯವಸ್ಥೆ ಮಾಡಿ ಅನುಕೂಲಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

   ಸ್ಥಳಕ್ಕೆ ಭೇಟಿ ನೀಡಿದ ಗ್ರಾಮದ ಹಿರಿಯ ಸಿ.ಕೆ. ಮೇಕ್ಕೇದ, ತಾಪಂ ಸದಸ್ಯ ಬಸನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಪರ್ವತಗೌಡ ಪಾಟೀಲ 50 ವರ್ಷಗಳ ಹಿಂದೆ ಶಾಲೆ ಕಟ್ಟಡವಾಗಿದ್ದು, ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿಮರ್ಿಸಬೇಕು. ತುತರ್ಾಗಿ ಶಾಲಾ ಮುಂಭಾಗದ ನೀರನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.