ಶ್ರೇಷ್ಟ ಅರ್ಥಶಾಸ್ತ್ರಜ್ಞ ಟಿ.ಎನ್.ಶ್ರೀನಿವಾಸನ್ ನಿಧನ

ಚೆನ್ನೈ13: ಶ್ರೇಷ್ಟ ಅರ್ಥಶಾಸ್ತ್ರಜ್ಞರಾಗಿದ್ದ ಟಿ.ಎನ್.ಶ್ರೀನಿವಾಸನ್ರವರು ಶನಿವಾರ ಚೆನ್ನೈನಲ್ಲಿ ನಿಧನ ಹೊಂದಿದರು, ಅವರಿಗೆ 86 ವರ್ಷ ವಯಸ್ಸಾಗಿತ್ತು.

1933ರಲ್ಲಿ ಜನಿಸಿದ ಅವರು, ಕೋಲ್ಕತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಪಡೆದಿದ್ದರು. 1977ರಲ್ಲಿ ವಿಶ್ವ ಭ್ಯಾಂಕ್ನ ಅಭಿವೃದ್ಧಿ ಸಂಶೋದನ ಕೇಂದ್ರದ ವಿಶೇಷ ಸಲಹೆಗಾರರಾಗಿದ್ದರು.

ಕಳೆದ 40 ವರ್ಷಗಳಲ್ಲಿ ಅವರು ಹಲವಾರು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ದೇಶದ ಆಥರ್ಿಕ ಸುಧಾರಣೆಯಲ್ಲಿ ಅವರ ಕೊಡುಗೆ ಅಪಾರವಾದದ್ದು. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಭಾರತ ಸಕರ್ಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.