ಬೆಳಗಾವಿ: ಸ್ವರಧಾರೆ ಹರಿಸಿದ ಸಂಗೀತ ಕಾರ್ಯಕ್ರಮ

ಲೋಕದರ್ಶನ ವರದಿ 

ಬೆಳಗಾವಿ 10: ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆ, ಬೆಳಗಾವಿಯ ಲೋಕಮಾನ್ಯ ಸಂಸ್ಥೆಯ ಸಹಯೋಗದೊಡನೆ  ಇಂದಿಲ್ಲಿ ಏರ್ಪಡಿಸಿದ ಸ್ವರಧಾರಾ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ  ಪಂ. ಗಣಪತಿ ಭಟ್ಟ ಹಾಸಣಗಿ ಅವರ     ಗಾಯನ ಮತ್ತು ಡಾ. ಅರಣ್ಯಕುಮಾರ ಅವರ ಎಸ್ರಾಜ ವಾದನದೊಂದಿಗೆ ಲೊಕಮಾನ್ಯ ರಂಗಮಂದಿರದಲ್ಲಿ ಸೇರಿದ ಕಲಾರಸಿಕರ ಮನ ತಣಿಸಿತು.  

     ಆರಂಭದಲ್ಲಿ ಲೋಕಮಾನ್ಯ ಸಂಚಾಲಕ ಸೇವಂತೀಭಾಯಿ ಶಹಾ, ಅನಿಲ ಚೌಧರಿ, ಗಜಾನನ ಧಾಮಣೇಕರ, ಜಿ. ಎಸ್. ಹೆಗಡೆ, ಪಂ. ಗಣಪತಿ ಭಟ್ಟ, ಡಾ. ಅರಣ್ಯ ಕುಮಾರ ಇವರು ದೀಪ ಬೆಳಗುವದರೊಡನೆ ಕಾರ್ಯಕ್ರಮ ಉದ್ಘಾಟಿಸಿದರು.  ಅನಿಲಕುಮಾರ ಅವರು ಕಲಾವಿದರ ಪರಿಚಯ ನೀಡಿದರು.  

      ಮೊದಲು ಡಾ. ಅರಣ್ಯಕುಮಾರ ಧಾರವಾಡ ಅವರು ಅಪರೂಪದ ವಾದ್ಯವಾದ ಎಸ್ರಾಜ ಮೂಲಕ  ಯಮನ ರಾಗವನ್ನು ವಿಲಂಬಿತ ಮತ್ತು ಧ್ರುತ  ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಪ್ರಸ್ತುತಪಡಿಸಿದರು. ಅವರಿಗೆ ಗೋಪಿನಾಥ್ ಅವರು ತಬಲಾ ಸಾಥ ನೀಡಿದರು.  

    ನಂತರ ಪಂ. ಗಣಪತಿ ಭಟ್ಟ ಹಾಸಣಗಿ ಅವರು ರಾಗ ಜನಸಮ್ಮೋಹಿನಿಯಲ್ಲಿ ಖ್ಯಾಲ್ ಚೀಜ್ ಮೋರಾ ಜಿಯಾ ಲಾಗೇ ನ ವಿಲಂಬಿತ ಏಕತಾಲದಲ್ಲಿ ಬಹಳ ಅಧಿಕಾರಯುತವಾದ ರೀತಿಯಲ್ಲಿ ಹಾಡಿ ನಂತರ ಧ್ರುತ ಮತ್ತು ತರಾನಾ ಪ್ರಸ್ತುತಪಡಿಸಿದರಲ್ಲದೆ ಒಂದು ಕನ್ನಡ ರಾಮಭಜನೆ ಮತ್ತು  ಭೈರವಿಯಲ್ಲಿ ಹಿಂದಿ ಭಕ್ತಿಗೀತೆ ಹಾಡಿದರು. ಅವರಿಗೆ ಡಾ. ಸುಧಾಂಶು ಕುಲಕಣರ್ಿ ಹಾಮರ್ೊನಿಯಂ ಮತ್ತು ಧಾರವಾಡದ ಶ್ರೀಧರ ಮಾಂಡ್ರೆ  ಅಷ್ಟೇ  ಸಮರ್ಥವಾಗಿ ತಬಲಾಸಾಥ ನೀಡಿದರು.  

ಇದು ಬೆಳಗಾವಿಯಲ್ಲಿ ಸಪ್ತಕ ಕಲಾಸಂಸ್ಥೆಯ ಏಳನೆಯ ವರ್ಷದ ಸ್ವರಸಂಧ್ಯಾ ಕಾರ್ಯಕ್ರಮವಾಗಿದ್ದು ಪ್ರತಿವರ್ಷ ದೇಶದ ಖ್ಯಾತ ಗಾಯಕ ವಾದಕರ  ಕಾರ್ಯಕ್ರಮಗಳನ್ನು ಏರ್ಪಡಿಸಿ ಸಂಗೀತ ಕಲಾಪ್ರಿಯರನ್ನು ದೊಡ್ಡ ಸಂಖ್ಯೆಯಲ್ಲಿ ಆಕಷರ್ಿಸುತ್ತ ಬಂದಿದೆ.