ನಾಳೆ ಡಾ.ಸಿ.ಬಿ.ಕುಲಿಗೋಡ 75ನೇ ವರ್ಷಕ್ಕೆ ಪಾದಾರ್ಪಣೆ

ಲೋಕದರ್ಶನ ವರದಿ

ಮುಗಳಖೋಡ 13: ಕೆಲವರಿಗೆ ತಮ್ಮ ಮಾತೇ ಬಂಡವಾಳ, ಮಾತನಾಡುವುದೇ ಸಾಧನೆಯಾದರೆ, ಇನ್ನೂ ಕೇಲವರಿಗೆ ಸಾಧನೆಯೇ ಮಾತಾಗಿರುತ್ತದೆ. ಅಂತಹವರ ಸಾಲಿಗೆ ಸೇರುವವ ವ್ಯಕ್ತಿ ಎಂದರೆ ಈ ಸುಕ್ಷೇತ್ರ ಮುಗಳಖೋಡ ಶ್ರಮಜೀವಿ ಉತ್ಸಾಹಿ ರಾಜಕೀಯ ವ್ಯಕ್ತಿಯಾದ ಡಾ.ಸಿ.ಬಿ.ಕುಲಿಗೋಡ ಅವರು ನಾಳೆ ದಿನಾಂಕ 15-1-2020 ರಂದು 74 ವಸಂತಗಳನ್ನು ಪೂರೈಸಿ 75ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಲಿದ್ದಾರೆ. 

ಚ.ವಿ.ವ.ಸಂಘದ ಮಾದವಾನಂದ ಸಭಾಭವನ ಮುಗಳಖೊಡದಲ್ಲಿ ನಡೆಯುವ ಶಿಕ್ಷಣ ಪ್ರೇಮಿ, ಪರಿಸರ ಪ್ರೇಮಿ ಡಾ. ಸಿ.ಬಿ.ಕುಲಿಗೋಡ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಥಣಿ ಮೋಟಗಿ ಮಠದ ಮ.ನಿ.ಪ್ರ. ಪ್ರಭು ಚನ್ನಬಸವ ಮಹಾಸ್ವಾಮಿಗಳು, ಸಮ್ಮುಖ ಪ.ಪೂ.ಮಹಾಂತ ದೇವರು ವಿರಕ್ತಮಠ ಶೇಗುಣಸಿ, ಅಧ್ಯಕ್ಷ ಸ್ಥಾನವನ್ನು ರಾಯಬಾಗದ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷರಾದ ಪ್ರತಾಪ ಅಣ್ಣಾ ವ. ಪಾಟೀಲ ಅವರು ವಹಿಸಲಿದ್ದು, ಜ್ಯೋತಿ ಪ್ರಜ್ವಲನೆಯನ್ನು ಮಹಾಂತೇಶ ಕವಟಗಿಮಠ ಮುಖ್ಯ ಸಚೇತಕರು, ಕನರ್ಾಟಕ ಸಕಾರ, ಬೆಂಗಳೂರು ಇವರು ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಡಾ. ಸಿದ್ದು ಹುಲ್ಲೋಳಿ ವಿಭಾಗಾಧಿಕಾರಿಗಳು ಜಮಖಂಡಿ, ಡಾ. ಎಲ್.ಎಸ್.ಜಂಬಗಿ, ಡಾ. ಮಹಾವೀರ ಎಸ್. ದಾನಿಗೊಂಡ, ಡಾ. ಬಂಡು ಸ. ಬಾಬಣ್ಣವರ, ರಾಜಶೇಕರ ಬಿ. ಪಾಟೀಲ. ಹಾಗೂ ಅತಿಥಿಗಳಾಗಿ ಬಿ.ಆರ್.ಆಜೂರ, ಗಿರಿಗೌಡ ಪಾಟೀಲ, ಜಿ.ಬಿ.ಡಂಬಳ ಅವರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರೈತರು, ಸೈನಿಕರು ಹಾಗೂ ಶಿಕ್ಷಕರಿಗೆ ಸನ್ಮಾನ ಮಾಡಲಾಗುವದು ಎಂದು ಚ.ವಿ.ವ ಸಂಘದ ಅಧ್ಯಕ್ಷರಾದ ಸಂಜಯ ಸಿ. ಕುಲಿಗೋಡ ಅವರ ಸಮ್ಮುಖದಲ್ಲಿ ಡಾ. ಸಂತೋಷ ಸಿ. ಕುಲಿಗೋಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.