ಲೋಕದರ್ಶನವರದಿ
ಮುಧೋಳ: ತಾಲೂಕಿನ ಮುಗಳಖೋಡ ಗ್ರಾಮದ ಶಿವಾನಂದ ಭಾರತಿ ಮಹಾಸ್ವಾಮಿಜಿಯವರ ಮಠದಲ್ಲಿ (ಮುಗಳಖೋಡ ಕ್ರಾಸ್) ಸಾದು ಚಕ್ರವತರ್ಿ ಡಾ|| ಶಿವಾನಂದ ಭಾರತಿ ಶ್ರೀಗಳ ಅಮೃತ ಶಿಲಾಮೂತರ್ಿ ಪ್ರಾಣ ಪ್ರತಿಷ್ಠಾಪನೆ ಹಾಗೂ ವಿವಿಧ ವಿಶಿಷ್ಟ ಕಾರ್ಯಕ್ರಮಗಳ ನಿಮಿತ್ಯ ಇದೇ ಜೂ.29 ರಿಂದ ಜುಲೈ 05 ಶುಕ್ರವಾರದ ವರೆಗೆ 7 ದಿನಗಳ ಕಾಲ ಅದ್ವೈತ ಸಾರ್ವಭೌಮ ಜಗದ್ಗುರು ಸಿದ್ಧಾರೂಢರ ಪುರಾಣವು ಪ್ರಾರಂಭಗೊಳ್ಳಲಿದೆ ಎಂದು ಶ್ರೀ ಮಠದ ಸಂಸ್ಥಾಪಕ ಪ.ಪು. ಶಂಕರಾನಂದ ಶ್ರೀಗಳು ಹೇಳಿದರು.
ಅವರು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಒಟ್ಟು 8 ದಿನ ನಡೆಯುವ ಉತ್ಸವದ ಮಾಹಿತಿಯ ಆಮಂತ್ರಣ ಪತ್ರಿಕೆಯನ್ನು ನೀಡಿ ಮಾತನಾಡುತ್ತಾಸ ಹಿಂದೇಂದು ಆಗದ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಾಡಿನ ಖ್ಯಾತ ಪ್ರವಚನ ಪಟು ಹಡಗಿನಾಳದ ಮಲ್ಲೇಶ್ವರ ಶರಣರು ಪುರಾಣ ನಡೆಸಿಕೊಡಲಿದ್ದಾರೆ. ಗ್ರಾಮದ ಹಾಗೂ ಸೂತ್ತ-ಮುತ್ತಲಿನ ಭಕ್ತ ಸಂಮೋಹ ಈ ಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳು ತಿಳಿಸಿದರು.ಈ ಸಂದರ್ಭದಲ್ಲಿ ಮಹಾಲಿಂಗಪ್ಪ ಕಲ್ಲೋಳ್ಳಿ, ಬಸಲಿಂಗಪ್ಪ ಹುಡೆದ, ಮಲ್ಲಪ್ಪ ಮುಚಂಡಿ, ಆನಂದ ಮಂಟೂರ, ಅಮಸಿದ್ಧ ಕೌಜಲಗಿ, ಪರಮಾನಂದ ಮಳಲಿ, ಯಲ್ಲವ್ವ ಡಂಗಿ, ಶಿವಾನಂದ ಸ್ವಾಮಿಗಳು ಮುಂತಾದವರು ಇದ್ದರು.