ನಾಳೆ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ

ಲೋಕದರ್ಶನ ವರದಿ

ಬೆಟಗೇರಿ 11: ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ಆಯೋಜಿಸಿರುವ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು 249 ನೇ ಬಸವ ಸ್ಮೃತಿ ಮಾಸಿಕ ಶಿವಾನುಭವ ಹಾಗೂ ಫಕೀರೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ರವಿವಾರ ಅ.13 ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ.

     249 ನೇ ಬಸವ ಸ್ಮೃತಿ ಮಾಸಿಕ ಶಿವಾನುಭವೋತ್ಸವವು ಸಂಜೆ 7 ಗಂಟೆಗೆ ನಡೆಯಲಿದ್ದು, ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಮೌನ ಮಲ್ಲಿಕಾರ್ಜುನ ಮಹಾ ಶಿವಯೋಗಿಗಳು ಕಾರ್ಯಕ್ರಮದ ಅಧ್ಯಕ್ಷತೆ, ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

       ಚುಳಕಿ ಗವಿಮಠದ ವೀರಸಂಗಯ್ಯ ಮಹಾಸ್ವಾಮಿಜಿ, ಬೀರನೋಳಿ ಚಿದಾನಂದ ಅಜ್ಜನವರು ದಿವ್ಯ ಸಮ್ಮುಖದಲ್ಲಿ, ಹಿಪ್ಪರಗಿಯ ಶಿವರುದ್ರ ಶರಣರ ನೇತೃತ್ವದಲ್ಲಿ, ಆಗಮಿತ ನಾಡಿನ ಸಕಲ ಹರ-ಗುರು, ಚರಮೂರ್ತಿಗಳ ಸಮ್ಮುಖದಲ್ಲಿ, ಆಗಮಿತ ಗಣ್ಯರ ಅತಿಥಿ ಸ್ಥಾನದ ಉಪಸ್ಥಿತಿಯಲ್ಲಿ ಪ್ರವಚನ ಜರುಗಲಿದೆ. ಕರಡಿಗುದ್ದಿಯ ವಿರುಪಾಕ್ಷ ರಾಚಣ್ಣವರ ಅನ್ನ ದಾಸೋಹ ಸೇವೆ ನೆರವೇರಿಸಲಿದ್ದಾರೆ. ಮಮದಾಪೂರದ ಚಿದಾನಂದ ಪಟಾತ ಅವರಿಂದ ಸಂಗೀತ ಸೇವೆ, ಕುಮಾರಿ ಲಕ್ಷ್ಮೀ ಒಡೆಯರ ಹಾಗೂ ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಲಿಂ. ಮಲ್ಲಪ್ಪ ಕುಂಬಾರ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವೂ ಸಹ ಜರುಗಲಿದೆ.

      ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಸಂತ-ಶರಣರು, ಆಧ್ಯಾತ್ಮ ಪ್ರವೀಣರು, ಗಣ್ಯರು ಸೇರಿದಂತೆ ಮಠದಲ್ಲಿ ಆಯೋಜಿಸಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಯೋಜಕ ಸಮಿತಿ ಪದಾಧಿಕಾರಿಗಳು, ಸದಸ್ಯರು ಪುರಾಣ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಮೌನ ಮಲ್ಲಿಕಾರ್ಜುನ ಮಠದ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಕ ಸಮಿತಿ ಸಂಚಾಲಕ ಮಂಜುನಾಥ ಶರಣರು ಪ್ರತಿಕಾ ಪ್ರಕಟನೆಗೆ ತಿಳಿಸಿದ್ದಾರೆ.