ನಾಳೆ ರಂಭಾಪುರಿ ಶ್ರೀಗಳಿಂದ ಧರ್ಮಸಭೆ


ಲೋಕದರ್ಶನ ವರದಿ

ರಾಣಿಬೆನ್ನೂರು24: ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತರಾಧ್ಯ  ಸಮುದಾಯ ಭವನದಲ್ಲಿ ಹೊನ್ನಾಳಿ ಚೆನ್ನಮಲ್ಲಿಕಾಜರ್ುನ ಸಂಸ್ಕೃತಿ ಪ್ರಸಾರ ಪರಿಷತ್ನಿಂದ ಜು.26 ರಂದು ಬೆಳಿಗ್ಗೆ 10:30ಕ್ಕೆ ವ್ಯಾಸಪೂಣರ್ಿಮೆಯ (ಗುರುಪೂಣರ್ಿಮೆ) ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ.

    ಪರಿಸರ ಹಾಗೂ ಅರಣ್ಯಖಾತೆ ಸಚಿವ ಆರ್.ಶಂಕರ್ ಧರ್ಮಸಭೆ ಉದ್ಘಾಟಿಸುವರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾಜರ್ುನ ಸ್ವಾಮೀಜಿ ನೇತೃತ್ವ ವಹಿಸುವರು. ಸಾಹಿತಿ ಗಿರಿಜಾದೇವಿ ದುರ್ಗದಮಠ ಅವರು ಗುರು ಮಹಿಮೆ ಕುರಿತು ಉಪನ್ಯಾಸ ನೀಡಲಿದ್ದಾರೆ.

    ರೋಟರಿ ಸಂಸ್ಥೆ ಅಧ್ಯಕ್ಷ ವಾಲಜಿಬಾಯಿ ಪಾಟೀಲ, ಕಾರ್ಯದಶರ್ಿ ಚೈತನ್ಯ ಮೆಹರವಾಡೆ, ಇನ್ನರ್ವ್ಹೀಲ್ ಸಂಸ್ಥೆ ಅಧ್ಯಕ್ಷೆ ಪ್ರತಿಭಾ ಪಟ್ಟಣಶೆಟ್ಟಿ, ಪೂಜಾ ವಿರುಪಣ್ಣನವರ ಆಗಮಿಸುವರು ಎಂದು ಶ್ರೀಮಠದ ಕಾರ್ಯದಶರ್ಿ ಅ.ಸಿ.ಹಿರೇಮಠ ತಿಳಿಸಿದ್ದಾರೆ.