ಪೆಟ್ರೋಲ್ ಬಂಕ್ಗಳಲ್ಲಿ ಶೌಚಾಲಯ ಕಡ್ಡಾಯ: ಡಿಸಿ

ಬಾಗಲಕೋಟೆ: ಜಿಲ್ಲೆಯಲ್ಲಿರುವ ಎಲ್ಲ ಪೆಟ್ರೋಲ್ ಬಂಕ್ಗಳಲ್ಲಿ ಶೌಚಾಲಯ ವ್ಯವಸ್ಥೆ ಕಡ್ಡಾಯವಾಗಿ ಇರತಕ್ಕದ್ದು ಎಂದು ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ಬಂಕ್ ಮಾಲಿಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪೆಟ್ರೋಲ್ ಬಂಕ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 168 ಪೆಟ್ರೋಲ್ ಬಂಕ್ಗಳಿದ್ದು, ಅವುಗಳಲ್ಲಿ 98 ಐ.ಓ.ಸಿ, 28 ಬಿಪಿಎಲ್ ಹಾಗೂ 42 ಎಚ್.ಪಿ.ಸಿ ಕಂಪನಿಯ ಪೆಟ್ರೋಲ್ ಬಂಕ್ಗಳಿವೆ. ಎಲ್ಲ ಬಂಕ್ಗಳ ಮಾಲಿಕರು ತಮ್ಮ ಬಂಕ್ಗಳ ಸುತ್ತ ಮುತ್ತಲೂ ಸ್ವಚ್ಛವಾಗಿಡುವುದು, ಜಾಗೃತಿ ಫಲಕಗಳ ಅಳವಡಿಕೆ,  ಇಂಧನ ದರಗಳ ಮಾಹಿತಿಗಳನ್ನು ಪ್ರರ್ದಶನ ಸುವ ಕೆಲಸವಾಗಬೇಕು ಎಂದರು.

ದೈನಂದಿನ ದಾಸ್ತಾನು ಪುಸ್ತಕ, ಸ್ಯಾಂಪಲ್ಗಳು, ಡೆನ್ಸಿಟಿ, ಟೆಂಪರ್ಚರ್ ಇತರೆ ಪುಸ್ತಕಗಳ ನಿರ್ವಹಣೆಯಾಗಬೇಕು. ಬಂಕ್ಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತು ಸಿ.ಸಿ ಟಿವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಒಳವಡಿಸಬೇಕು.

    ಸಿಸಿ ಟಿವಿ ಕ್ಯಾಮರಾಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ತುಂಬಾ ಹಳೆಯದಾಗಿದ್ದಲ್ಲಿ  ಹೊಸ ಕ್ಯಾಮರಾಗಳನ್ನು ಒಳವಡಿಸಲು ಸೂಚಿಸಿದರು. ಇದರ ಜೊತೆಗೆ ಸುರಕ್ಷತಾ ವ್ಯವಸ್ಥೆ ಮತ್ತು ಅಗ್ನಿ ಅವಘಡ ಸಂರಕ್ಷಣೆ ವ್ಯವಸ್ಥೆ ಮಾಡಬೇಕು. ಸಂಬಂಧಿಸಿದ ಅಧಿಕಾರಿಗಳು ತಪಾಸಣೆ ಬಂದ ವೇಳೆ ದಾಖಲೆ, ಸ್ಟಾಕ್ಬುಕ್ಗಳ ಪರಿಶೀಲನೆಗೆ ನೀಡಲು ತಿಳಿಸಿದರು.

ಪೆಟ್ರೋಲ್ ಬಂಕ್ಗಳಲ್ಲಿ ಸಣ್ಣ ಪುಟ್ಟ ಶಾಪ್ಗಳನ್ನು ತೆರೆಯಲು ಅವಕಾಶ ಕಲ್ಪಿಸಲು ತಿಳಿಸಿದಾಗ ಕಂಪನಿಯವರ ಜೊತೆಗೆ ಮಾತನಾಡಿ ಶಾಪ್ಗಳನ್ನು ಹಾಕಲು ಕ್ರಮಕೈಗೊಳ್ಳಲಾಗುವುದೆಂದು ಬಂಕ್ ಮಾಲಿಕರು ಸಭೆಗೆ ತಿಳಿಸಿದರು. 

      ಈಗಾಗಲೇ 168 ಬಂಕ್ ಪೈಕಿ ಒಂದು ಬಂಕ್ಗಳಲ್ಲಿ ಮಾತ್ರ ಮಿಲ್ಕ ಪಾರ್ಲರ ಇರುವುದಾಗಿ ಮಾಲಿಕರು ತಿಳಿಸಿದರು.

   ರಾತ್ರಿ ವೇಳೆಯಲ್ಲಿ ಬಂಕ್ಗಳಲ್ಲಿ ಇಂಧನ ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದು, ಪೊಲೀಸ್ ಗಸ್ತು ಹಾಕಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಈ ಕುರಿತು ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪವ್ವಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿದರ್ೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿದ ಪೆಟ್ರೋಲ್ ಬಂಕ್ಗಳ ಮಾಲಿಕರು ಉಪಸ್ಥಿತರಿದ್ದರು.