ಬೆಳಗಾವಿ, 24: ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ವಿಜ್ಞಾನಿಗಳು ಆಗಬೇಕು ಅದಕೊಸ್ಕರ ಅಟಲ್ ಟಿಂಕರಿಂಗ ಲ್ಯಾಬ್ದ ಸದುಪಯೋಗ ಪಡೆದುಕೊಂಡು ಮುಂದೆ ಒಳ್ಳೆಯ ಸಂಶೋಧಕನನ್ನಾಗಿ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ. "ಜೈ ಜವಾನ, ಜೈ ಕಿಸಾನ, ಜೈ ವಿಜ್ಞಾನ ಎನ್ನುವಂತೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರ ಹೆಸರನ್ನು ಶಾಲೆಯಲ್ಲಿಯ ಪ್ರಯೋಗಾಲಯಗಳು ಪುನಃ ಸ್ಮರಿಸುತ್ತಿವೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಯಾಶೀಲತೆಯಿಂದ ಹಾಗೂ ಗುರುಗಳ ಮಾರ್ಗದರ್ಶನದಿಂದ ಶ್ರೇಷ್ಠ ವಿಜ್ಞಾನಿಗಳಾಗಿ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಪ್ರಸಿಧ್ಧಿಗೊಳಿಸುವುದು ಇಂದಿನ ವಿದ್ಯಾಥರ್ಿಗಳ ಧ್ಯೇಯವಾಗಿರಬೇಕು ಮತ್ತು ಶೈಕ್ಷಣಿಕ ಫಲಿತಾಂಶದಲ್ಲಿ ಬಾಲಕಿಯರ ಮೇಲುಗೈ ಎನ್ನುವಂತೆ ಸಂಶೋಧನಾ ಕ್ಷೇತ್ರದಲ್ಲಿಯೂ ಕೂಡ ಬಾಲಕಿಯರ ಮೇಲುಗೈ ಎಂಬ ಛಾಪನ್ನು ವಿದ್ಯಾರ್ಥಿನಿಯರು ಮೂಡಿಸಬೇಕು. ಅಟಲ್ ಟಿಂಕರಿಂಗ ಲ್ಯಾಬ್ನ ಉದ್ಘಾಟನಾ ಕಾರ್ಯಕ್ರಮವವು ದಿ.24ರಂದು ಜರುಗಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ರೈಲ್ವೆ ರಾಜ್ಯ ಸಚಿವರು ಭಾರತ ಸರಕಾರದ ಶ್ರೀಮಾನ ಸುರೇಶ ಅಂಗಡಿ ಯವರು ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.
ಬೆಳಗಾವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ ಪೊತದಾರರವರು ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡುವಾಗ "ವಿದ್ಯಾರ್ಥಿ, ವಿನೂತನ ವಿಜ್ಞಾನ ಈ 3ವಿ ಎಂಬ ಅಸ್ತ್ರಗಳು ದೇಶವನ್ನು ಸಶಸ್ತ್ರವಾಗಿ ಮಾಡುತ್ತವೆ. ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಬೆಳಗಾವಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಸುಧೀರ ಕುಲಕರ್ಣಿ ಮತ್ತು ಕಾರ್ಯದರ್ಶಿ ಗಳಾದ ಶ್ರೀನಿವಾಸ ಶಿವಣಗಿ, ಮುಖ್ಯೋಪಾದ್ಯಾಯರಾದ ಎಮ್. ಕೆ. ಮಾದಾರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಮ್. ಕೆ. ಮಾದಾರ ಸ್ವಾಗತಿಸಿ, ಶ್ರೀನಿವಾಸ ಶಿವಣಗಿ ಪ್ರಾಸ್ತಾವಿಸಿ, ನಿರೂಪಮಾ ತಾಳುಕರ ನಿರೂಪಿಸಿ, ಸುಧೀರ ಕುಲಕರ್ಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ವಿ. ಆರ್. ಗುಡಿ, ಆರ್. ಎನ್. ಕಂಕನವಾಡಿ ಹಾಗೂ ಸಂಸ್ಥೆಯ ಎಲ್ಲ ಶಾಲೆಗಳ ಮುಖ್ಯೋಪಾದ್ಯಾಯರು ಹಾಗೂ ಶ್ರೀಮತಿ. ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿನಿಯರ ಉಪಸ್ಥಿತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು.