ಇಂದು ತೊಗರಿ ಬೆಳೆ ಪರಿಹಾರಕ್ಕಾಗಿ ಹೋರಾಟ
ತಾಳಿಕೋಟಿ 08 : ತಾಲೂಕಿನ ಬಹುತೇಕ ಕಡೆ ರೈತರು ಈ ವರ್ಷ ಬೆಳೆದ ತೊಗರಿ ಬೆಳೆ ಹೂವು,ಕಾಪು ಉದುರುವುದು ಎಲೆಗಳು ಸಣ್ಣದಾಗಿ ಇಳುವರಿ ಕಡಿಮೆಯಾಗಿರುವುದು ರೈತರಲ್ಲಿ ಆತಂಕವನ್ನು ಸೃಷ್ಟಿಸಿದ್ದು ಸರ್ಕಾರ ಕೂಡಲೇ ತೊಗರಿ ಬೆಳೆದ ರೈತರ ಬೆಳೆಯ ಸಮೀಕ್ಷೆಯನ್ನು ನಡೆಸಿ ಹಾನಿಗೆ ಸೂಕ್ತ ಪರಿಹಾರ ನೀಡಬೇಕು, ಕಳಪೆ ಬೀಜ ವಿತರಿಸಿದ ಕಂಪನಿ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಹಮ್ಮಿಕೊಂಡ ರೈತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆ ಇಂದು ನಡೆಯಲಿದೆ.ಮುಂಜಾನೆ 10:00 ಘಂಟೆಯಿಂದ ಎಲ್ಲಾ ಗ್ರಾಮಗಳಿಂದ ರೈತರು ತಮ್ಮ ತಮ್ಮ ಟ್ಯಾಕ್ಟರ್ ಸಮೇತ ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಭಾಗವಹಿಸುವರು,ಶ್ರೀ ಬಸವೇಶ್ವರ ವೃತ್ತದಿಂದ ಟ್ರ್ಯಕ್ಟರ್ ಮೆರವಣಿಗೆ ಆರಂಭವಾಗಿ ಡಾ.ಅಂಬೇಡ್ಕರ್ ಸರ್ಕಲ್, ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ಬಸ್ ನಿಲ್ದಾಣ ಮಾರ್ಗವಾಗಿ ಮತ್ತೇ ಬಸವೇಶ್ವರ ವೃತ್ತಕ್ಕೆ ಬಂದು ಅಲ್ಲಿ ಸಭೆಯಾಗಿ ಮಾರು್ಡವುದು. ನಂತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ತಾಲೂಕಾಡಳಿತಕ್ಕೆ ಮನವಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.