ಲೋಕದರ್ಶನ ವರದಿ
ಮುದ್ದೇಬಿಹಾಳ,3: ವಿಜಯಪುರ ಜಿಲ್ಲೆ ಕಗ್ಗೋಡದಲ್ಲಿ ಡಿ.24 ರಿಂದ ನಡೆಯಲಿರುವ ಭಾರತ ವಿಕಾಸ ಸಂಗಮ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆ ಇಲ್ಲಿನ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನ.4 ರಂದು ಸಂಜೆ 4ಕ್ಕೆ ನಡೆಯಲಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಭೆಯಲ್ಲಿ ಭಾಗವಹಿಸಿ ಉತ್ಸವದ ಕುರಿತು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕು ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮನವಿ ಮಾಡಿದ್ದಾರೆ.
ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಭೆಗೂ ಮುನ್ನ ಉತ್ಸವದ ಕುರಿತು ಜನಜಾಗೃತಿ ಮೂಡಿಸಲು ಬನಶಂಕರಿ ದೇವಸ್ಥಾನದಿಂದ ದ್ಯಾಮವ್ವದೇವಿ ಕಟ್ಟೆ ಮಾರ್ಗವಾಗಿ ಕಲ್ಯಾಣ ಮಂಟಪದವರೆಗೆ ಬೈಕ್ ರ್ಯಾಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಬಿಂಬಿಸುವ ಈ ಉತ್ಸವ ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತದೆ. 2004ರಲ್ಲಿ ಮೊದಲ ಉತ್ಸವ ಉತ್ತರ ಪ್ರದೇಶದ ವಾರಣಾಸಿಯಲ್ಲಿ, 2ನೇ ಉತ್ಸವ ಉಪ್ರದ ಸುನಾರ್ನಲ್ಲಿ, 3ನೇ ಉತ್ಸವ ಕನರ್ಾಟಕದ ಕಲಬುಗರ್ಿಯಲ್ಲಿ, 4ನೇ ಉತ್ಸವ ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕನ್ಹೇರಿ ಮಠದಲ್ಲಿ ನಡೆದಿದ್ದವು. ಈಗ 5ನೇ ಸಮ್ಮೇಳನ ಕಗ್ಗೋಡದಲ್ಲಿ ವಿಜಯಪುರ ನಗರ ಶಾಸಕ ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ನಡೆಯಲಿದೆ. ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಇರುವ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮತ್ತು ಕಾರ್ಯಕ್ರಮಕ್ಕೆ ಈ ತಾಲೂಕಿನಿಂದ ಹೆಚ್ಚಿನ ಜನರನ್ನು ಕಳಿಸಲು ಅಗತ್ಯ ಜಾಗೃತಿ ಮೂಡಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಚಚರ್ಿಸಲಾಗುತ್ತದೆ. ಶಾಸಕ ಪಾಟೀಲ ಯತ್ನಾಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಧುರೀಣರಾದ ಪಿ.ಬಿ.ಕುಲಕಣರ್ಿ, ಪರಶುರಾಮ ಪವಾರ, ಮಲಕೇಂದ್ರಗೌಡ ಪಾಟೀಲ, ಶಿವಶಂಕರಗೌಡ ಹಿರೇಗೌಡರ, ರಾಜುಗೌಡ ಗೌಡರ, ಕನರ್ಾಟಕ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಮಾಜಿ ಪುರಸಭೆ ಸದಸ್ಯ ಸತೀಶ ಕುಲಕಣರ್ಿ, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ, ಪ್ರಮುಖರಾದ ಸಂಜೀವ ಓಸ್ವಾಲ್, ಸಿದ್ದು ಹೆಬ್ಬಾಳ ಇನ್ನಿತರರು ಇದ್ದರು.