ಹಣ್ಣುಗಳ ಪ್ರದರ್ಶನ-ಮಾರಾಟ ಮೇಳ ಇಂದು ಕೊನೆಯ ದಿನ

ಲೋಕದರ್ಶನ ವರದಿ

ಕೊಪ್ಪಳ 22: ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಏರ್ಪಡಿಸಿರುವ ದಾಳಿಂಬೆ, ಕರಬೂಜ, ಕಲ್ಲಂಗಡಿ ಹಾಗೂ ದ್ರಾಕ್ಷಿ ಮೇಳದಲ್ಲಿ ಭಾರಿ ವ್ಯಾಪಾರವಾಗಿದ್ದು, ಮೂರು ದಿನದಲ್ಲಿ ಸುಮಾರು 30 ಲಕ್ಷ ರೂ. ವಹಿವಾಟು ನಡೆದಿದೆ.

 ಶಿವರಾತ್ರಿ ಆಚರಣೆ ಸಂದರ್ಭದಲ್ಲಿಯೇ ಈ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜನೆಗೊಂಡಿರುವುದು ಒಳ್ಳೆಯ ವ್ಯಾಪಾರ ನಡೆದಿದೆ. ನಾನಾ ಬಗೆಯ ಕಲ್ಲಂಗಡಿ, ಕರಬೂಜ, ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣುಗಳು ವ್ಯಾಪಕವಾಗಿ ಈ ಮೇಳದಲ್ಲಿ ಮಾರಾಟಗೊಂಡಿವೆ.ಇನ್ನು ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಕೇವಲ ಮೂರು ದಿನಗಳಲ್ಲಿ ಸುಮಾರು 25 ಟನ್ ಕಲ್ಲಂಗಡಿ, 8ರಿಂದ 10 ಟನ್ ಕರಬೂಜ, 10 ಟನ್ ದ್ರಾಕ್ಷಿ ಹಾಗೂ ಸುಮಾರು 8 ಟನ್ ದಾಳಿಂಬೆ ಮಾರಾಟವಾಗಿವೆ. ಸುಮಾರು 30 ಲಕ್ಷ ರೂ. ವಹಿವಾಟು ನಡೆದಿದೆ. ಹೀಗಾಗಿ ಮೇಳ ಯಶಸ್ವಿಯಾಗಿದ್ದು, ನಾಳೆಯವರೆಗೂ ವಿಸ್ತರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿದರ್ೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.

ಕೊಪ್ಪಳದ ಫ್ರೂಟ್ಸ್ ಮೇಳಕ್ಕೆ ಶಾಸಕ-ಸಂಸದರ ಶಾಸಕ, ಸಂಸದರ ಭೇಟಿ: ಮೇಳಕ್ಕೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ಸಂಗಣ್ಣ ಕರಡಿ ಪ್ರತ್ಯೇಕವಾಗಿ ಭೇಟಿ ನೀಡಿದರು. ಮೇಳದಲ್ಲಿನ ಕರಬೂಜ, ಕಲ್ಲಂಗಡಿ, ದ್ರಾಕ್ಷಿ ಹಾಗೂ ದಾಳಿಂಬೆ ಹಣ್ಣಿನ ವಿವಿಧ ತಳಿಗಳ ಬಗ್ಗೆ ಹಾಗೂ ಮೇಳದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಉಪ ನಿದರ್ೇಶಕ ಕೃಷ್ಣ ಉಕ್ಕುಂದ ಹಣ್ಣಿನ ಹಾಗೂ ಹಣ್ಣುಗಳ ಮೌಲ್ಯವಧರ್ಿತ ಉತ್ಪನ್ನಗಳ ಬಗ್ಗೆ ಸಂಸದರಿಗೆ ಮಾಹಿತಿ ನೀಡಿದರು. ಬಳಿಕ ಸಂಸದ ಸಂಗಣ್ಣ ಕರಡಿ ಮೇಳದಲ್ಲಿ ಕಲ್ಲಂಗಡಿ ಹಣ್ಣಿನ ರುಚಿ ಸವಿದರು