ಇಂದು ರಾಜಗುರು ಪರ್ವತ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ

Today is the holy memorial of Rajaguru Parvata Shivacharya

ಇಂದು ರಾಜಗುರು ಪರ್ವತ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ  

ತಾಳಿಕೋಟಿ 27: ತಾಲೂಕಿನ ನಾವದಗಿ ಗ್ರಾಮದ ಲಿಂಗೈಕ್ಯ ಶತಾಯುಷಿ ರಾಜಗುರು ಪರ್ವತ ಶಿವಾಚಾರ್ಯರ 25ನೇ ವರ್ಷದ ಪುಣ್ಯ ಸ್ಮರಣೋತ್ಸವ ಎಪ್ರಿಲ್ 28ರಂದು ಜರುಗಲಿದೆ. ಇದರ ಅಂಗವಾಗಿ ಬೆಳಿಗ್ಗೆ 7 ಘಂಟೆಗೆ ಕರ್ತೃಗದ್ದಿಗೆ ಮಹಾ ರುದ್ರಭಿಷೇಕ ಸಹಸ್ರ ಬಿಲ್ವಾರ್ಚನೆ ಸಕಲ ಪೂಜಾ ವಿಧಿ ವಿಧಾನಗಳುರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಸಾನಿಧ್ಯದಲ್ಲಿ ಜಗದೀಶ ಶಾಸ್ತ್ರಿಗಳು ಹಾಗೂ ವಿರೇಶ ಶಾಸ್ತ್ರಿಗಳು ಮೈಲೇಶ್ವರ ಇವರು ನೆರವೇರಿಸುವರು. ನಂತರ ನಾವದಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರ್ವತ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆ ಪಲ್ಲಕ್ಕಿಯೊಂದಿಗೆ ಜರುಗುವದು ಆದಕಾರಣ ಬೆಳಗ್ಗೆ 9 ಗಂಟೆಗೆ ಶ್ರೀಮಠದ ಭಕ್ತ ಸಮೂಹ ಬಂದು ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.