ಖಾನಾಪುರ: ಇಂದು ಸರ್ವೋದಯ ವಿದ್ಯಾಲಯದ ವಜ್ರ ಮಹೋತ್ಸವ

ಲೋಕದರ್ಶನ ವರದಿ

ಖಾನಾಪುರ 06: 1966ರಲ್ಲಿ ಸ್ಥಾಪನೆಗೊಂಡ ಸರ್ವೋದಯ ಹೆಸರಿನ ಈ ಸಂಸ್ಥೆ ಉತ್ತಮ ವಾತಾವರಣ ನಿಮರ್ಾಣ, ನೈತಿಕತೆ, ಅಭಿವೃದ್ಧಿ ನಿಮರ್ಾಣ ಸಂಸ್ಥೆಯ ಉದ್ದೇಶ ಇಟ್ಟುಕೊಂಡು ಮೊದಲ ಪ್ರಾಂಶುಪಾಲ ಹುದ್ದೆ ಅಲಂಕರಿಸಿದ ದಿ.ರೆವೆರೆಂಡ್ ಫಾದರ್ ಎಡ್ವಿನ್ ಅವರ ಸಮರ್ಥ ಮುಂದಾಳತ್ವದಿಂದ ಸಂಸ್ಥೆ ಇಂದು ಉನ್ನತ ಗುಣ ಮಟ್ಟದ ಶಿಕ್ಷಣ ನೀಡುವ ಕೇಂದ್ರವಾಗಿ ಮೂಡಿ ವಜ್ರ ಮಹೋತ್ಸವ ಆಚರಿಸಿಕೊಳ್ಳಲು ಮದುವಣಗಿತ್ತಿಯಂತೆ ಸಜ್ಜಾಗಿ ನಿಂತಿದೆ ಎಂದು ಫಾದರ ಫೆಲಿಕ್ಸ ಮಂತೆರಾವ ಹೇಳಿದರು. 

ಪಟ್ಟಣದಲ್ಲಿರುವ ಸವರ್ೊದಯ ವಿದ್ಯಾಲಯದಲ್ಲಿ ಗುರುವಾರದಂದು ಹಮ್ಮಿಕೊಂಡ ವಜ್ರ ಮಹೋತ್ಸವ ಕಾರ್ಯಕ್ರಮ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಇಂಥ ಅನೇಕ ಗಣ್ಯರು ಸಾರಥ್ಯ ವಹಿಸಿಕೊಂಡು ಸತತ ಪ್ರಗತಿಯತ್ತ ದಾಪುಗಾಲು ಇಡುತ್ತಿರುವ  ಶ್ಲಾಘನೀಯ ಸೇವೆ ಸಲ್ಲಿಸಿದ ಮುಖ್ಯಸ್ಥರುಗಳ ಪರಿಶ್ರಮ ಇಂದು ಸಾರ್ಥಕವಾಗಿದೆ ಎಂದರು. 

ಈಗ ಡಿಸೆಂಬರ್ 6 ರಂದು ನಡೆವ ಹೆಮ್ಮೆಯ ವಜ್ರ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಾ.ಡೆರಿಕ್ ಫನರ್ಾಂಡೀಸ್ ಮತ್ತು ಶ್ಯಾಮಸುಂದರ ಕೇಶ ಕಾಮತ, ಐಟಿ ಕಮಿನಷನರ್ ದಿಲ್ಲಿ ಅವರು ಆತಿಥ್ಯ ವಹಿಸುವರು. 

ಡಿ.7ರಂದು ಹಿರಿಯ ವಿದ್ಯಾಥರ್ಿಗಳ ಒಕ್ಕೂಟದ ಪುನರಮಿಲನ ಕಾರ್ಯಕ್ರಮದಲ್ಲಿ ಶ್ರೇಷ್ಠ ಉದ್ಯಮಿ ದೇವದಾಸ ನಾಯಕ,  ಮತ್ತು ಕ್ಯಾಪ್ಟನ್ ಎಡ್ಡಿ ವೇಗಾಸ್ ಅತಿಥಿಗಳಾಗಿ ಆಗಮಿಸುವರು ಎಂದು ಕಾರ್ಯಕ್ರಮಗಳ ವಿವರ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು.