ಧಾರವಾಡ: ಇಂದು ಮೇ 29 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜಿಲ್ಲೆಯ ನವಲಗುಂದ ಪುರಸಭೆ ಹಾಗೂ ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ಜರುಗಲಿದೆ.
ನವಲಗುಂದ ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. 9766 ಪುರುಷ ಹಾಗೂ 9744 ಮಹಿಳಾ ಮತದಾರರು ಸೇರಿ ಒಟ್ಟು 19512 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಪುರಸಭೆ 23 ಸ್ಥಾನಗಳಿಗೆ ಒಟ್ಟು 87 ಅಭ್ಯಥರ್ಿಗಳು ಸ್ಫಧರ್ೆ ಮಾಡಿದ್ದಾರೆ.
ಅಳ್ನಾವರ ಪಟ್ಟಣ ಪಂಚಾಯತಿಯಲ್ಲಿ 18 ಸ್ಥಾನಗಳಿವೆ. 7682 ಪುರುಷ ಮತ್ತು 7563 ಮಹಿಳೆಯರು ಸೇರಿ ಒಟ್ಟು 15249 ಮತದಾರರು ಮತ ಚಲಾಯಿಸಲಿದ್ದಾರೆ. ಪಟ್ಟಣ ಪಂಚಾಯಿತಿ 18 ಸ್ಥಾನಗಳಿಗೆ ಒಟ್ಟು 76 ಅಭ್ಯಥರ್ಿಗಳು ಸ್ಪಧರ್ಿಸಲಿದ್ದಾರೆ.
ಕಲಘಟಗಿ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 17 ಸ್ಥಾನಗಳಿವೆ. 6400 ಪುರುಷರು ಹಾಗೂ ಹಾಗೂ 6517 ಮಹಿಳಾ ಮತದಾರರು ಸೇರಿ ಒಟ್ಟು 12919 ಮತದಾರರಿದ್ದಾರೆ. ಕಲಘಟಗಿ ಪಟ್ಟಣ ಪಂಚಾಯತನ 17 ಸ್ಥಾನಗಳಿಗೆ ಒಟ್ಟು 47 ಅಭ್ಯಥರ್ಿಗಳು ಸ್ಪಧರ್ಿಸಿದ್ದಾರೆ.
ನವಲಗುಂದ ಪುರಸಭೆ ಚುನಾವಣೆಗೆ ಒಟ್ಟು 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ, ಅದರಲ್ಲಿ 4 ಸೂಕ್ಷ್ಮ, 7 ಅತೀ ಸೂಕ್ಷ್ಮ ಮತ್ತು 12 ಸಾಮಾನ್ಯ ಮತಗಟ್ಟೆಗಳಿವೆ. ಮತದಾನಕ್ಕಾಗಿ ಒಟ್ಟು 23 ಕಂಟ್ರೋಲ್ ಯುನಿಟ್ (ಸಿಯು) ಮತ್ತು 23 ಬ್ಯಾಲೆಟ್ ಯುನಿಟ್(ಬಿ.ಯು) ಬಳಸಲಾಗುತ್ತಿದೆ. 27 ಜನ ಅಧ್ಯಕ್ಷಾಧಿಕಾರಿ (ಪಿ.ಆರ್.ಓ) ಹಾಗೂ 1ನೇ, 2ನೇ ಮತ್ತು 3ನೇ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 108 ಜನ ಮತದಾನ ಕೇಂದ್ರಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ಅಳ್ನಾವರ ಪಟ್ಟಣ ಪಂಚಾಯತಿ ಚುನಾವಣೆಗೆ ಒಟ್ಟು 18 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲವೂ ಸಾಮಾನ್ಯ ಮತಗಟ್ಟೆಗಳಾಗಿವೆ. ಮತದಾನಕ್ಕಾಗಿ 18 ಕಂಟ್ರೋಲ್ ಯುನಿಟ್ ಹಾಗೂ 18 ಬ್ಯಾಲೆಟ್ ಯುನಿಟ್ (ಬಿ.ಯು) ಬಳಸಲಾಗುತ್ತದೆ. 21 ಜನ ಅಧ್ಯಕ್ಷಾಧಿಕಾರಿ (ಪಿ.ಆರ್.ಓ) ಹಾಗೂ 1ನೇ, 2ನೇ, 3ನೇ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 84 ಜನ ಸಿಬ್ಬಂದಿಗಳು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕಲಘಟಗಿ ಪಟ್ಟಣ ಪಂಚಾಯತಿ ಚುನಾವಣೆಗಾಗಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 2 ಸೂಕ್ಷ್ಮ, 4 ಅತೀ ಸೂಕ್ಷ್ಮ ಹಾಗೂ 11 ಸಾಮಾನ್ಯ ಮತಗಟ್ಟೆಗಳಾಗಿವೆ. 17 ಕಂಟ್ರೋಲ್ಯುನಿಟ್ (ಸಿ.ಯು) ಮತ್ತು 17 ಬ್ಯಾಲೇಟ್ ಯುನಿಟ್ (ಬಿ.ಯು)ಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ. 20 ಜನ ಅಧ್ಯಕ್ಷಾಧಿಕಾರಿ (ಪಿ.ಆರ್.ಓ) ಹಾಗೂ 1ನೇ, 2ನೇ, 3ನೇ ಮತಗಟ್ಟೆ ಅಧಿಕಾರಿ ಸೇರಿ ಒಟ್ಟು 80 ಜನ ಸಿಬ್ಬಂದಿಗಳು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.
ನವಲಗುಂದ ಪುರಸಭೆ ಹಾಗೂ ಅಳ್ನಾವರ ಮತ್ತು ಕಲಘಟಗಿ ಪಟ್ಟಣ ಪಂಚಾಯತಿಗಳ ಒಟ್ಟು 58 ಸದಸ್ಯ ಸ್ಥಾನಗಳಿಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಪಕ್ಷೇತರರು ಸೇರಿ ಒಟ್ಟು 210 ಜನ ಸ್ಪಧರ್ಿಸಿದ್ದಾರೆ. ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 23,848 ಪುರುಷ ಹಾಗೂ 23,826 ಮಹಿಳಾ ಸೇರಿ ಒಟ್ಟು 47,680 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ಸಾರ್ವತ್ರಿಕ ರಜೆ: ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವ್ಯಾಪ್ತಿಯಲ್ಲಿ (ನಾಳೆ ಮೇ.29 ರಂದು) ಮತದಾನ ನಿಮಿತ್ಯ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತ್ತು ನೋಟಾ ಮತ ಚಲಾವಣೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.