ಇಂದು ಸಿದ್ಧಾರೂಢರ ಕಳಸಾರೋಹನ, ತೆಪ್ಪೋತ್ಸವ
Today is the Kalasarohana and Teppotsava of the Siddharudhas
ಇಂದು ಸಿದ್ಧಾರೂಢರ ಕಳಸಾರೋಹನ, ತೆಪ್ಪೋತ್ಸವ
ಮಹಾಲಿಂಗಪುರ: ಆ.11ರಂದು ಪಟ್ಟಣದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಕಳಸಾರೋಹಣ ಹಾಗೂ ಜಗದ್ಗುರು ಶ್ರೀಸಿದ್ದಾರೂಢರ 96ನೇ ಪುಣ್ಯಾರಾಧನೆ ನಿಮಿತ್ಯ 43ನೇ ವರ್ಷದ ತೆಪ್ಪೋತ್ಸವ(ಜಲರಥೋತ್ಸವ) ಜರುಗಲಿದೆ.
ಮುಂಜಾನೆ 11ಕ್ಕೆ ಬನಶಂಕರಿದೇವಸ್ಥಾನದಿಂದ ಸಿದ್ದಾರೂಢರ ಆಶ್ರಮದವರೆಗೆ ಕುಂಭಮೇಳ, ಸಕಲ ಮಂಗಲವಾದ್ಯಗಳೊಂದಿಗೆ ಕಳಸದ ಮೆರವಣೆಗೆ ಹಾಗೂ ಆದಿಚುಂಚನಗಿರಿ ಜಗದ್ಗುರು ನಿರ್ಮಲಾನಂದ ಮಹಾಸ್ವಾಮಿಗಳ ಭವ್ಯ ಸ್ವಾಗತ, ನಂತರ ಅವರ ಅಮೃತಹಸ್ತದಿಂದ ಕಳಸಾರೋಹನ, ಸದ್ಗುರು ಸದನ ಉದ್ಘಾಟನೆ ನಂತರ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಚಿತ್ರದುರ್ಗದ ಶಿವಲಿಂಗಾನಂದ ಮಹಾಸ್ವಾಮಿಜಿ, ಹಾಸನದ ಶಂಭುನಾಥ ಸ್ವಾಮಿಜಿ, ಮಂದ್ರೂಪ ರಾಮಚಂದ್ರಣ್ಣ ಮೇತ್ರೆ ಭಾಗವಹಿಸಲಿದ್ದಾರೆ. ಆಶ್ರಮದ ಪೀಠಾಧಿಪತಿ ಸಹಜಾನಂದ ಸ್ವಾಮಿಜಿ ಅಧ್ಯಕ್ಷತೆವಹಿಸಲಿದ್ದಾರೆ. ನಂತರ ಮುತ್ತೈದೆಯರಿಗೆ ಉಡಿ ತುಂಬುವದು, ಭಜನಾ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 3-30ಕ್ಕೆ ತೆಪ್ಪೋತ್ಸವದ ಪ್ರವಚನ ಕಾರ್ಯಕ್ರಮದಲ್ಲಿ ಜೋಡಕುರಳಿಯ ಚಿದ್ಘನಾನಂದ ಸ್ವಾಮಿಜಿ, ತಾಳಿಕೋಟಿಯ ಸಿದ್ದಲಿಂಗ ದೇವರು, ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ಗದಗದ ಮುಕ್ತಾದೇವಿತಾಯಿ, ಲಕ್ಷ್ಮೇಶ್ವರದ ಗೀತಾತಾಯಿ ಪ್ರವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯೆ ಉಮಾಶ್ರೀ, ಶಾಸಕ ಸಿದ್ದು ಸವದಿ, ಉದ್ಯಮಿ ಸಂಗಮೇಶ ನಿರಾಣಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ರಾ. ಭಾವಿಕಟ್ಟಿ, ಸದಸ್ಯರಾದ ಸವಿತಾ ಹುರಕಡ್ಲಿ, ಬಸವರಾಜ ಯರಗಟ್ಟಿ, ಶರಣಶ್ರೀ ಮಲ್ಲಪ್ಪ ಪೂಜಾರಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ, ಲೋಕೋಪಯೋಗಿ ಅಭಿಯಂತರ ರವಿ ಎಸ್.ಸೂರನ್ನ ಭಾಗವಹಿಸಲಿದ್ದಾರೆ.
ಸಂಜೆ 6ಕ್ಕೆ ವಿಶಾಲವಾದ ಕೆರೆಯಲ್ಲಿ ತೆಪ್ಪೋತ್ಸವ(ಜಲ ರಥೋತ್ಸವ) ಜರುಗಲಿದೆ ಎಂದು ಸಿದ್ದಾರೂಢ ಬ್ರಹ್ಮವಿದ್ಯಾಶ್ರಮ ಟ್ರಸ್ಟ್ ಕಮಿಟಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 