ಇಂದು ನೆನಹು ನಮನ ಸಮಾರಂಭ

ಲೋಕದರ್ಶನವರದಿ

ಹಾವೇರಿ: ಆಕಾಶವಾಣಿ ಕಲಾವಿದ ಪುರಾಣ ಪ್ರವಚನಕಾರರಾಗಿದ್ದ ಪಂಚಾಕ್ಷರ ಶಾಸ್ತ್ರೀಗಳವರ  ನೆನಹು ನಮನ ಸಮಾರಂಭ 29.08.2019ರ ಗುರುವಾರ ಬೆಳಗ್ಗೆ 10.30 ಕ್ಕೆ   ತಾಲೂಕಿನಕುರುಬಗೊಂಡ ಗ್ರಾಮದಲ್ಲಿ ಜರುಗುವುದು. ನೆಗಳೂರ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯಸ್ವಾಮೀಜಿ ಸಾನ್ನಿದ್ಯ ವಹಿಸುವರು. ನಾಡಿನ ಹಲವಾರು ಕಲಾವಿದರು ಧಾರ್ಮಿಕ ಮುಖಂಡರು ರಾಜಕೀಯ ಧುರೀಣರು ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು ಎಂದು ಅವರ ಸಹೋದರ ತಬಲಾ ವಾದಕ ಬಸಲಿಂಗಯ್ಯ ಹಿರೇಮಠ ಪತ್ರಿಕೆಗೆ ತಿಳಿಸಿದ್ದಾರೆ.