ಲೋಕದರ್ಶನ ವರದಿ
ಕೊಪ್ಪಳ 18: ನಗರದ ಸದರ್ಾರಗಲ್ಲಿ ಮುಸ್ಲಿಂ ಪಂಚ್ ಕಮೀಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಜರತ್ ಮಹೆಬೂಬ ಸುಬಾನಿ (ರಅ) ಅವರ ಪವಿತ್ರ ಗ್ಯಾರವಿ ಷರೀಫ್ ಹಬ್ಬದ ಆಚರಣೆ ನಿಮಿತ್ಯ ಸತತ 17ನೇ ಬಾರಿಗೆ ಬಡ ಮುಸ್ಲಿಂ ಜೋಡಿಗಳ ಉಚಿತ ಸಾಮೂಹಿಕ (ನಿಖಾ) ವಿವಾಹ ಕಾರ್ಯಕ್ರಮ ಜ.19 ರ ರವಿವಾರ ಬೆಳಿಗ್ಗೆ 11.30 ಕ್ಕೆ ಸಾಲಾರ್ಜಂಗ್ ರಸ್ತೆ ಹೈದರಲಿ ಸರ್ಕಲ್ ಬಳಿ ಸರ್ಧಾರಗಲ್ಲಿ ಓಣಿಯಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಸ್ಲಿಂ ಧರ್ಮ ಗುರು ಮುಫ್ತಿ ಮೌಲಾನಾ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿ ರವರು ವಹಿಸಲಿದ್ದಾರೆ ಹಾಗೂ ಖಾಜಿ ಸಾಹೇಬರು ಪಾಲ್ಗೊಂಡು 05 ಜೋಡಿಗಳ ಸಾಮೂಹಿಕ ನಿಖಾ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸರ್ದಾರಗಲ್ಲಿ ಮುಸ್ಲಿಂ ಪಂಚ್ ಕಮೀಟಿ ಅಧ್ಯಕ್ಷ ಶಹಾಬುದ್ದೀನ್ ಸಾಬ ನೂರಬಾಷಾ ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ತಾಲೂಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಯ್ಯದ್ ಜುಲ್ಲು ಖಾದರ್ ಖಾದ್ರಿ, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಅಮ್ಜದ್ ಪಟೇಲ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಪಾಷಾ ಕಾಟನ್, ಅಂಜುಮನ್ ಅಧ್ಯಕ್ಷ ಹುಸೇನ್ ಪೀರಾ ಮುಜಾವರ (ಚಿಕನ್), ಹಿರಿಯ ಪತ್ರಕರ್ತ ಎಂ.ಸಾದಿಕ್ ಅಲಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಸದರ್ಾರಗಲ್ಲಿ ಓಣಿಯ ಮಾನ್ವಿಪಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.