ನವದೆಹಲಿ, ಡಿ 25 ಪ್ರಧಾನಿ
ಅಟಲ್ ಬಿಹಾರಿ ವಾಜಪೇಯಿ ಅವರ ೯೫ನೇ ಜನ್ಮ ದಿನವನ್ನು ದೇಶ ಇಂದು ಆಚರಿಸುತ್ತಿದೆ. ಶಿಕ್ಷಣ ತಜ್ಞ, ಸ್ವಾತಂತ್ರ್ಯ
ಹೋರಾಟಗಾರ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮ ದಿನವನ್ನು ಸಹ ಆಚರಣೆ ಮಾಡಲಾಗುತ್ತಿದೆ. ಮೂರು
ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಮೊದಲ ಬಾರಿಗೆ
೧೩ ದಿನಗಳ ಕಾಲ ಪ್ರಧಾನಿಯಾಗಿದ್ದರು. ೨ನೇ ಅವಧಿಯಲ್ಲಿ ೧೯೯೮ರಿಂದ ೯೯ರವರೆಗೆ ೧೧ ತಿಂಗಳ ಕಾಲದೇಶವನ್ನು ಮುನ್ನಡೆಸಿದ್ದ ಅವರು ೧೯೯೯ರಿಂದ
೨೦೦೪ರವರೆಗೆ ಅವಧಿ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ವಾಜಪೇಯಿ ಪಾತ್ರರಾಗಿದ್ದರು. ೨೦೧೫ರಲ್ಲಿ
ವಾಜಪೇಯಿ ಅವರಿಗೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು. ದಕ್ಷ ಆಡಳಿತಕ್ಕೆ
ಹೆಸರಾಗಿದ್ದ ವಾಜಪೇಯಿ, ತಮ್ಮ ಅವಧಿಯಲ್ಲಿ ಆರ್ಥಿಕ ನೀತಿಗಳು, ಮೂಲಸೌಕರ‍್ಯ ಅಭಿವೃದ್ಧಿ ಯೋಜನೆಗಳು,
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅವರ ಪ್ರಮುಖ ಸಾಧನೆಗಳಾಗಿದ್ದವು. ಅವರ ನಾಯಕತ್ವದಲ್ಲಿ ೧೯೯೮ರಲ್ಲಿ ಪೋಖ್ರಾನ್‌ನಲ್ಲಿ ೨ನೇ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಭಾರತ ಅಣ್ವಸ್ತ್ರ
ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದ್ದರು. ವಾಜಪೇಯಿ ಅವರು ೧೯೨೪ರ ಡಿಸೆಂಬರ್ ೨೫ರಂದು ಜನ್ಮ ತಳೆದಿದ್ದರು. ವಿದೇಶಾಂಗ
ಸಚಿವರಾಗಿ ೧೯೭೭ರಲ್ಲಿ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ್ದರು.
ಅವರ ವ್ಯಕ್ತಿತ್ವ ಹಲವು ವೈಶಿಷ್ಟ್ಯಗಳಿಂದ ಕೂಡಿತ್ತು. ಉತ್ತಮ ವಾಗ್ಮಿ, ಬರಹಗಾರ, ಕವಿ, ಸಾಮಾಜಿಕ ಕಾರ್ಯಕರ್ತ,
ಪತ್ರಕರ್ತರಾಗಿಯೂ ಅವರು ಜನಮಾನಸದಲ್ಲಿ ನೆಲೆಸಿದ್ದಾರೆ. ವಾಜಪೇಯಿ ನಾಯಕರಲ್ಲೇ ನಾಯಕರಾಗಿ ಗುರುತಿಸಿಕೊಂಡ ಮಹಾನ್ ಚೇತನ. ಅವರ ಅನೇಕ ಕವಿತೆಗಳು ಹೃದಯ
ಸ್ಪರ್ಶಿಸಿಯಾಗಿದ್ದು, ಜನರ ಬಾಯಲ್ಲಿ ಸದಾ ನಲಿದಾಡುವಂತಿತ್ತು. ಇದೇ ಸಂದರ್ಭದಲ್ಲಿ ದೇಶ ಭಾರತ ರತ್ನ ಪಂಡಿತ್ ಮದನ್ ಮೋಹನ್
ಮಾಳವೀಯ ಅವರ ಜನ್ಮ ದಿನೋತ್ಸವವನ್ನು ಆಚರಿಸುತ್ತಿದೆ.
ಶಿಕ್ಷಣ ತಜ್ಞರಾಗಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ದೇಶಕ್ಕೆ ಮಾಳವೀಯ ತನ್ನದೇ ಆದ ಕೊಡುಗೆ
ನೀಡಿದ್ದಾರೆ.