ಇಂದು ಚಿಮ್ಮಡ ಗ್ರಾಮದಲ್ಲಿ ಗವಿಸಿದ್ದೇಶ್ವರ ಶ್ರೀ ಸದ್ಭಾವನಾ ಪಾದಯಾತ್ರೆ
Today is Gavisiddeshwara Sri Sadbhavana Padayatra in Chimmada village
ಮಹಾಲಿಂಗಪುರ 25: ಸಮೀಪದ ಚಿಮ್ಮಡ ಗ್ರಾಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಸದ್ಭಾವನಾ ಪಾದಯಾತ್ರೆ ಇಂದು ನ.26ರಂದು ಬೆಳಗ್ಗೆ 6:30ಕ್ಕೆ ಜರುಗಲಿದೆ ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಸದ್ಭಾವನಾ ಪಾದಯಾತ್ರೆಯು ಬೆಳಗ್ಗೆ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ನೇತಾಜಿ ವೃತ್ತದ ಮಾರ್ಗವಾಗಿ ಭಜಂತ್ರಿ ಓಣಿ, ಕರಿಸಿದ್ದೇಶ್ವರ ದೇವಸ್ಥಾನ, ಯಲ್ಲಮ್ಮನ ಗುಡಿ, ಕನಕದಾಸ ವೃತ್ತದಿಂದ ಚನ್ನಮ್ಮ ವೃತ್ತ, ವಿರಕ್ತಮಠ, ವಿರಕ್ತಮಠ, ದಾಸಿಮಯ್ಯ ವೃತ್ತದ ಮಾರ್ಗದಿಂದ ಬಸ್ ನಿಲ್ದಾನದವರೆಗೆ ಮಾದಯಾತ್ರೆ ಜರುಗಲಿದೆ. ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಬೆಳಗ್ಗೆ 7:30ಕ್ಕೆ ಗವಿಸಿದ್ದೇಶ್ವರ ಶ್ರೀಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಗ್ರಾಮಸ್ಥರು ಬೆಳಿಗ್ಗೆ ಮನೆ ಹಾಗೂ ಬೀದಿಗಳಲ್ಲಿ ರಂಗೋಲಿ ಹಾಕಿ ಗ್ರಾಮವನ್ನು ವಿಶೇಷವಾಗಿ ಸಿಂಗರಿಸಿ ಶ್ರೀಗಳನ್ನು ಭಕ್ತಿಯಿಂದ ಸ್ವಾಗತಿಸಬೇಕು ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರುಭಾಗವಹಿಸಿ ಗವಿಶ್ರೀಗಳ ದರ್ಶನ, ವಾಣಿಯನ್ನು ಕೇಳಿ ಪುನೀತರಾಗಬೇಕೆಂದು ಪ್ರಭುಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 