ಇಂದು ಸ್ವಚ್ಛ ಸವರ್ೇಕ್ಷಣ ಗ್ರಾಮೀಣ ಕುರಿತು ಅರಿವು: ವೆಂಕಟ್ ರಾಜಾ


ಕೊಪ್ಪಳ 31: ಕೊಪ್ಪಳ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಸ್ಟ್-1 ರಿಂದ 30 ರವರೆಗೆ ನಡೆಯಲಿರುವ `ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018' ಕುರಿತು ಜಿಲ್ಲೆಯಲ್ಲಿ ಅರಿವು ಕಾರ್ಯಕ್ರಮ ಜರುಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.

  ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಹಮ್ಮಿಕೊಂಡಿರುವ ``ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018''ರ ಕಾರ್ಯಕ್ರಮಕ್ಕೆ ಈಗಾಗಲೇ ನವದೆಹಲಿಯಲ್ಲಿ ಚಾಲನೆ ದೊರೆತಿದ್ದು, ಬೃಹತ್ ಪ್ರಮಾಣದಲ್ಲಿ ನಾಗರಿಕರು ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು, ಸ್ವಚ್ಛತೆ, ಶುಚಿತ್ವ ಹಾಗೂ ನೈರ್ಮಲ್ಯದ ಮಹತ್ವದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವುದು ಮತ್ತು ನೈರ್ಮಲ್ಯದ ಬಗ್ಗೆ ಮೌಲ್ಯ ಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿಯನ್ನು ನೀಡುವುದು ``ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018'' ಉದ್ದೇಶವಾಗಿದೆ. 

  ದೇಶದಾದ್ಯಂತ 698 ಜಿಲ್ಲೆಗಳು, 6980 ಗ್ರಾಮಗಳು, 50 ಲಕ್ಷ ನಾಗರಿಕರ ಸಂದರ್ಶನ ಮತ್ತು ಅವರ ಅಭಿಪ್ರಾಯಗಳನ್ನು ಪಡೆಯುವುದು ಮತ್ತು 34,900 ಸಾರ್ವಜನಿಕ ಸ್ಥಳಗಳನ್ನು ಸಮೀಕ್ಷೆಗೆ ಒಳಪಡಿಸುವುದು ಸವರ್ೇಕ್ಷಣೆಯ ಗುರಿಯಾಗಿದೆ.

  ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಆಗಸ್ಟ್-1 ರಿಂದ 30 ರವರೆಗೆ ಸಮೀಕ್ಷೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೂಡ ಈ ಸಮೀಕ್ಷೆ ನಡೆಯಲಿದೆ. ಅದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ, ಸ್ವಚ್ಛತೆ ಮತ್ತು ಉತ್ತಮ ಪರಿಸರ ಕಾಪಾಡಬೇಕಾಗಿದೆ. ಕೇಂದ್ರ ಸಕರ್ಾರವು ಸ್ವಾಯತ್ತ ಸಂಸ್ಥೆಗಳಿಂದ ಸ್ವಚ್ಛತೆ ಹಾಗೂ ಶೌಚಾಲಯಗಳ ಬಳಕೆ ಬಗ್ಗೆ ಮೌಲ್ಯಮಾಪನ ನಡೆಸುವುದರಿಂದ ಗ್ರಾಮಗಳಲ್ಲಿರುವ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂತೆ ನಡೆಯುವ ಸ್ಥಳ, ಕುಡಿಯುವ ನೀರು ಸಂಗ್ರಹ ಸ್ಥಳಗಳು, ಪಂಚಾಯತ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮದ ಮುಖ್ಯ ಬೀದಿಗಳಲ್ಲಿ ಸ್ವಚ್ಛತೆ, ಶುಚಿತ್ವವನ್ನು ಕಾಪಾಡಬೇಕಿದೆ.  ಎಲ್ಲಾ ಧಾಮರ್ಿಕ ಸ್ಥಳಗಳಲ್ಲಿರುವ ಶೌಚಾಲಯಗಳನ್ನು ಸುಸ್ಥಿತಿಯಲ್ಲಿರುವಂತೆ ಗ್ರಾ.ಪಂ.ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ವಿದ್ಯಾಥರ್ಿಗಳು/ ಸಾರ್ವಜನಿಕರು/ ಸಂಘ ಸಂಸ್ಥೆಗಳು (ಸ್ತ್ರೀ ಶಕ್ತಿ, ಸ್ವಸಹಾಯ ಸಂಘ ಇವರಿಗೆ ಈ ಕುರಿತು ಸವಿಸ್ತಾರವಾದ ಮಾಹಿತಿ ನೀಡಿ ಜಾಥಗಳನ್ನು/ ಕಾರ್ಯಗಾರಗಳನ್ನು/ ಸಭೆಗಳನ್ನು ಆಯೋಜಿಸಿ ``ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018'' ಕಾರ್ಯಕ್ರಮ ಯಶಸ್ವಿಗೊಳಿಸಲು ಮಾರ್ಗದರ್ಶನ ನೀಡಲಾಗಿರುತ್ತದೆ.

  ಸ್ವಚ್ಛ ಸವರ್ೇಕ್ಷಣ ಗ್ರಾಮೀಣ-2018 ಸಮೀಕ್ಷೆಗೆ ಸಂಬಂಧಿಸಿದಂತೆ ಸ್ವಚ್ಛತೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಶಾಲಾ ವಿದ್ಯಾಥರ್ಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವಚ್ಛತೆಗೆ ಸಂಬಂಧಿಸಿದ ಪ್ರಚಾರದ ದ್ವನಿ ಮುದ್ರಣ, ಸ್ವಚ್ಛತಾ ಸವರ್ೇಕ್ಷಣಾ ಸ್ವಚ್ಛತೆ ಗೀತೆ, ಸ್ವಚ್ಛತಾ ಘೋಷಣೆಗಳನ್ನು ಬರೆಸುವಂತೆ ಪ್ರೋತ್ಸಾಹಿಸುವುದು ಹಾಗೂ ಅತ್ಯುತ್ತಮವಾದುದನ್ನು ಆಯ್ಕೆಗೊಳಿಸಿ ಗ್ರಾಮ ಪಂಚಾಯತ್ ವತಿಯಿಂದ ಇಲಾಖಾ ವೆಬ್ಸೈಟ್ನಲ್ಲಿ ದಾಖಲಿಸಲಾಗುವುದು.  

  ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಉತ್ತಮ ಶ್ರೇಣಿ ಪಡೆದ ರಾಜ್ಯ ಮತ್ತು ಜಿಲ್ಲೆಗಳಿಗೆ ಅಕ್ಟೋಬರ್ 02, 2018 ರಂದು ನವದೆಹಲಿಯಲ್ಲಿ ಗಾಂಧಿ ಜಯಂತಿ ದಿನದಂದು ಪುರಸ್ಕಾರ ನೀಡಿ ಗೌರವಿಸುವ ಸಮಾರಂಭ ಜರುಗಲಿದ್ದು, ಕೊಪ್ಪಳ ಜಿಲ್ಲೆ ಮತ್ತು ಕನರ್ಾಟಕ ರಾಜ್ಯವನ್ನು ಅಗ್ರ ಶ್ರೇಯಾಂಕಕ್ಕೆ ಕೊಂಡೊಯ್ಯುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ.  ಈ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ವೆಂಕಟ್ರಾಜಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.