ಇಂದು ಹಜರತ್ ಟಿಪ್ಪು ಸುಲ್ತಾನ್ ಜಯಂತಿ

ಲೋಕದರ್ಶನ ವರದಿ

ಕೊಪ್ಪಳ 09*: ನ. 10ರಂದು ಜಿಲ್ಲಾಡಳಿತ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿಧರ್ಾರಿಸಲಾಗಿದೆ ಎಂದು ನಗರಸಭೆ ಸದಸ್ಯ ಅಮ್ಜದ್ ಪಟೇಲ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಅವರು ರಾಜ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಸರಕಾರದ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಲು ನಿರ್ಧರಿಸಿದೆ. ಸರಕಾರವು ಎಲ್ಲಾ ಜಯಂತಿಗಳ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದರು, ಟಿಪ್ಪು ಜಯಂತಿಯ ವಿಚಾರದಲ್ಲಿ ಧ್ವಂಧ್ವ ನೀತಿಯನ್ನು ಅನುಸರಿಸುತ್ತಿದೆ. ಆಚರಣೆಯ ವಿಚಾರವನ್ನು ಸ್ವಾಗತಿಸುತ್ತೆವೆ, ಆದರೆ ಭಾವ ಚಿತ್ರದ ಮೇರವಣಿಗೆಗೆ ಅವಕಾಶ ನೀಡದಿರುವುದರಿಂದ್ದ ಆಚರಣೆಯನ್ನು ಕಳೆಗೊಂದುವಂತೆ ಮಾಡಿದೇ ಮುಂದಿನ ದಿನಮಾನದಲ್ಲಿ ಸರಕಾರವು ಈ ಬಗ್ಗೆ ಚಿಂತಿಸಿ ಸೂಕ್ತ ನಿಧರ್ಾರ ಕೈಗೊಳಲಿ ಎಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವರು ಆರ್.ಶಂಕರ್ ನೇರವೆರಿಸಲಿದ್ದು, ಮೌಲಾನಾ ಮುಪ್ತಿ ಮೊಹಮ್ಮದ್ ನಜೀರ್ ಸಾನಿಧ್ಯವಹಿಸುವರು, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕತ್ಷೆವಹಿಸುವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಎಲ್ಲಾ ಸಮಾಜದ ಮುಖಂಡರು ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.