ಚಡಚಣ 2 : ತಾಲೂಕಿನ ತದ್ದೇವಾಡಿ ಗ್ರಾಮದಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಾಲಾ ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲಾಯಿತು.ಅನೇಕ ರೋಗಗಳು ಅಶುದ್ಧ ಕುಡಿಯುವ ನೀರಿನಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದ ಮಾತಾಗಿದೆ ಹಾಗಾಗಿ ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯಿಂದ ಸ್ವಚ್ಚ ಹಾಗೂ ನೈರ್ಮಲ್ಯವಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಫಿಲ್ಟರ್ ಅಳವಡಿಕೆ ಮಾಡಲಾಯಿತು.
ಮಾತನಾಡಿದ ಶಾಲಾ ಮುಖ್ಯಗುರುಗಳು ಮಾತನಾಡಿ ಇದನ್ನು ಸ್ವಇಚ್ಛೆಯಿಂದ ಎಲ್ಲ ಎಸ್ಡಿಎಮ್ಸಿ ಸದಸ್ಯರು,ತದ್ದೇವಾಡಿಯ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರ ಆರ್ಥಿಕ ನೆರವಿನಿಂದ ನೀರಿನ ಘಟಕವನ್ನು ಅಳವಡಿಸಲಾಯಿತು. ಅದಕ್ಕೆ ಎಲ್ಲ ಮಕ್ಕಳು ಹಾಗೂ ಪಾಲಕ ಪೋಷಕರು ಬಹಳಷ್ಟು ಸಂತೋಷಪಟ್ಟು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಜನ ಸೇವೆಯೇ ಜನಾರ್ಧನ ಸೇವೆ, ಇಂದಿನ ಆರೋಗ್ಯದಾಯಕ ಮಕ್ಕಳೇ ನಾಳೆಯ ಸಧೃಡ ದೇಶದ ನಾಗರೀಕರಾಗುತ್ತಾರೆ ಎಂಬ ನಾಣ್ಣುಡಿಯಂತೆ ತದ್ದೇವಾಡಿ ಗ್ರಾಮ ಮತ್ತು ನಮ್ಮ ಸರಕಾರಿ ಶಾಲೆ ನೈಜ ಉದಾಹರಣೆಯಾಗಿದೆ.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು,ಗ್ರಾಮಸ್ಥರು, ಶಿಕ್ಷಕರು,ಪಾಲಕರು ಇದ್ದರು.