ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಾಗರಿಕರು: ಬಿರಾದಾರ
ಇಂಡಿ 02: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗವಾದ ಅಕ್ಕಲಕೋಟೆ ತಾಲೂಕಿನಾದ್ಯಂತ ಕನ್ನಡವೇ ಇನ್ನೂವರೆಗೆ ಮಾತೃಭಾಷೆಯಾಗಿದೆ ಎಂದರೆ ತಪ್ಪಾಗಲಾರದು. ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಶಿರವಳವಾಡಿ ಗ್ರಾಮದ ಜಿಲ್ಲಾಪರಿಷದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಏಳನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೇಹತ್ರೇ ಕನ್ನಡ ವಿದ್ಯಾಲಯದ ಶಿಕ್ಷಕ ಎನ್ ಎಸ್ ಬಿರಾದಾರ ಅವರು ಮಾತನಾಡಿ ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಪ್ರಜೆಗಳು, ಅಜ್ಞಾನ ವೆಂಬ ಕತ್ತಲೆಯಿಂದ ಸುಜ್ಞಾನ ವೆಂಬ ಬೆಳಕಿನೆಡೆಗೆ ವಯುವ ಕಾರ್ಯ ಶಿಕ್ಷಕರದ್ದಾಗಿರುತ್ತದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಇಂದಿನ ಮಕ್ಕಳು ಮೊಬೈಲ್ ತಂತ್ರಜ್ಞಾನಕ್ಕೆ ಅಣಿಯಾಗದೆ ಪುಸ್ತಕದ ಗಿಳಿ ಯಾಗಬೇಕು ಎಂದೂ ಹೇಳಿದರು. ಅತಿಥಿಗಳಾಗಿ ಇಬ್ರಾಹಿಂಪುರ ಕನ್ನಡ ಶಾಲೆಯ ಶಿಕ್ಷಕ ಭೀಮು ಭಜೆ, ದಯಾನಂದ ವರನಾಳೆ, ಅಶೋಕ ಖೋಗನೂರೆ ಮಾತನಾಡಿದರು.
ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶಿವರಾಜ ಹತ್ತರಕಿ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪನ ಸಮಿತಿಯ ಶಿಕ್ಷಣ ತಜ್ಞ ಮಾರುತಿ ಕೋಟಗೆ, ಚಲುವಾದಿ ಮೇಡಂ, ಹತ್ತರಕಿ ಸರ್, ಹನ್ನೂರೆ ಸರ್, ಅಂಗನವಾಡಿಯ ಸುತಾರ ಮೇಡಂ, ಹನ್ನೂರೆ ಮೇಡಂ ಹಾಗೂ ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಶರಣಮ್ಮ ಚಲುವಾದಿ ನಿರೂಪಿಸಿದರು.