ಸಿದ್ದಾಪುರ: 'ತಂಬಾಕು ಹಾಗೂ ಮತ್ತು ಬರಿಸುವ ಪದಾರ್ಥಗಳ ಸೇವನೆಯಿಂದ ವ್ಯಕ್ತಿಯ ಆಯಸ್ಸು, ಆದಾಯ ಕ್ಷೀಣಿಸುತ್ತದೆ' ಎಂದು ಸಿವಿಲ್ ನ್ಯಾಯಾಧೀಶ ಸಿದ್ದರಾಮ ಎಸ್. ಅಭಿಪ್ರಾಯಪಟ್ಟರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಪಟ್ಟಣದಹಾಳದ ಕಟ್ಟಾದ ಸಕರ್ಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾದಕ ಪದಾರ್ಥ ಸೇವನೆಯಿಂದ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೆಡುತ್ತದೆ. ಆದ್ದರಿಂದ ಮಾದಕ ಪದಾರ್ಥ ಸೇವನೆಯನ್ನು ಬಿಡಲು ದೃಢ ನಿಶ್ಚಯ ಮಾಡಬೇಕು ತಂಬಾಕಿನಲ್ಲಿರುವ ರಾಸಾಯನಿಕ ವಸ್ತು ಮತ್ತು ಬರಿಸುವ ಗುಣ ಹೊಂದಿದೆ. ಆದ್ದರಿಂದ ಒಮ್ಮೆ ತಂಬಾಕು ಸೇವನೆ ಆರಂಭಿಸಿದರೆ ಅದು ಚಟವಾಗುತ್ತದೆಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಡಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಸಹಾಯಕ ಸಕರ್ಾರಿ ವಕೀಲ ಚಂದ್ರಶೇಖರ ಎಚ್.ಎಸ್., ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ, ಮುಖ್ಯ ಶಿಕ್ಷಕ ಜಿ.ಐ.ನಾಯ್ಕ, ವಕೀಲೆ ಭಾರತಿ, ವೈದ್ಯಾಧಿಕಾರಿಗಳಾದ ಡಾ .ಶ್ರೀಪ್ರಿಯಾ ಹಾಗೂ ಡಾ.ಶ್ರೀದೇವಿ ಇದ್ದರು.
ಎಸ್.ಆರ್.ಶೆಟ್ಟಿಸ್ವಾಗತಿಸಿದರು. ಜಯಲಕ್ಷ್ಮೀ ಹೆಗಡೆ ನಿರೂಪಿಸಿದರು. ಸುಶೀಲಾವಂದಿಸಿದರು. ತಂಬಾಕು ಸೇವನೆಯ ದುಷ್ಪರಿಣಾಮಗಳಬಗ್ಗೆ ಸ್ಲೈಡ್ಶೋ ಮೂಲಕ ವಿವರಣೆ ನೀಡಲಾಯಿತು.