ಹುಬ್ಬಳ್ಳಿ 30 : ರೇಲ್ವೆ ಇಲಾಖೆಯಲ್ಲಿ ಮಾನ್ಯತೆಗಾಗಿ ನಡೆಯುತ್ತಿರುವ ಚುಣಾವಣೆಯ ಅಂಗವಾಗಿ ಂಋಖಿಗಅ ಗೆ ಸೇರಿದ ಸೌತ್ ವೆಸ್ಟರ್ನ್ ರೈಲ್ವೆ ಎಂಪ್ಲಾಯಿಸ್ ಯೂನಿಯನ್- ಖಘಖಇಗ ವತಿಯಿಂದ ಪ್ರಚಾರ ನಡೆಸಲಾಯಿತು. ಇಂದು ರೇಲ್ವೆ ವರ್ಕಶಾಪ್,ಲೋಕೋಶೆಡ್,ಆರ್‌ಜಿಎಸ್ ಡಿಆರ್‌ಎಂ ಕಚೇರಿ,ರೈಲ್ ಸೌಧ ಇತ್ಯಾದಿಗಳಲ್ಲಿ ಪ್ರಚಾರ ಮಾಡುತ್ತಾ ಯೂನಿಯನ್‌ನ ಅಖಿಲಭಾರತ ನಾಯಕರಾದ ನಿರಂಜನ ಮಾಹಾಪಾತ್ರ ಅವರು ಈ ಮಾತನಾಡುತ್ತಾ, 1991ರಿಂದ ಪ್ರಾರಂಭವಾದ ಆರ್ಥಿಕ ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾ/ರವು ರೈಲ್ವೆ ವಲಯವನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿದೆ. ಇದರಿಂದಾಗಿ ರೈಲ್ವೆಯು ಕ್ರಮೇಣವಾಗಿ ವ್ಯಾಪಾರಿ ವಲಯವಾಗಿ ಬದಲಾಗುತ್ತಿದ್ದು, ಎಲ್ಲ ಸೇವೆಗಳು ದುಬಾರಿಯಾಗುತ್ತಿವೆ. ಇಲ್ಲಿಯವರೆಗೆ ರೈಲ್ವೆ ಇಲಾಖೆ ನಿರ್ವಹಿಸುತ್ತಿದ್ದ ಸಾಮಾಜಿಕ ಜವಾಬ್ದಾರಿ, ವಿವಿಧ ರಿಯಾಯಿತಿಗಳು, ಸೌಲಭ್ಯಗಳನ್ನು ಹಿಂಪಡೆಯಲಾಗುತ್ತಿದೆ. ಈಗಾಗಲೇ ರೈಲ್ವೆ ನೌಕರರ ಸಂಖ್ಯೆಯನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ನಿವೃತ್ತಿ ಅಥವಾ ಇನ್ನಿತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಯನ್ನೇ ನಿಲ್ಲಿಸಲಾಗುತ್ತಿದೆ. ಪ್ರಸ್ತುತ ನೌಕರರ ಮೇಲೆ ಕೆಲಸದಒತ್ತಡತೀವ್ರವಾಗಿ ಹೆಚ್ಚಾಗುತ್ತಿದೆ.ರೈಲ್ವೆ ಅಪಘಾತಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಮತ್ತೊಂದೆಡೆ ಶಾಶ್ವತ ಹುದ್ದೆಗಳ ಸ್ಥಾನದಲ್ಲಿಗುತ್ತಿಗೆ ಪದ್ಧತಿಯುಜಾರಿಯಾಗುತ್ತಿದೆ. ರೈಲ್ವೆ ನೌಕರರಕಠಿಣ ಪರಿಶ್ರಮ, ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಒಟ್ಟಾರೆರೈಲ್ವೆ ನೌಕರರು ಸರ್ಕಾರದ ಕ್ರೂರ ಶೋಷಣೆಗೆ ಗುರಿಯಾಗಿರುವರು. ಈ ಎಲ್ಲ ನೀತಿಗಳ ಮುಂದುವರಿಕೆಯಾಗಿ ಇಡೀ ರೈಲ್ವೆ ವಲಯವನ್ನೇ ಲಾಭದಾಹಿ ಉದ್ಯಮಪತಿಗಳಿಗೆ ಹಸ್ತಾಂತರ ಮಾಡುವ ದಿನಗಳು ಇನ್ನುದೂರವಿಲ್ಲ ಎನ್ನುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈಲ್ವೆಚುನಾವಣೆಯು ನಡೆಯುತ್ತಿದ್ದು, ಈಗಾಗಲೇ ಮೂರು ವಿಭಾಗಗಳಲ್ಲಿ ಸಂಘದ ಪರವಾಗಿ ಪ್ರಚಾರ ನಡೆಸಲಾಗುತ್ತಿದೆ. ಎಲ್ಲಾ ರೈಲ್ವೆ ನೌಕರರು ಅಬ್ಬರದ ಪ್ರಚಾರಕ್ಕೆ, ಆಮಿಷ-ಒತ್ತಡಗಳಿಗೆ ಒಳಗಾಗದೆ ನೈಜ ಸಂಘವಾದ ಖಘಖಇಗ ನ ಕ್ರಮ ಸಂಖ್ಯೆ 3,ಧ್ವಜದ ಗುರುತಿಗೆ ಮತ ಹಾಕುವ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಯೂನಿಯನ್ ಕಾರ್ಯಾಧ್ಯಕ್ಷರಾದ ಕಾ.ಗುಡುದಪ್ಪ ಹಾಗೂ ವಲಯ ಪ್ರಧಾನ ಕಾರ್ಯದರ್ಶಿಗಳಾದ ಕಾ.ಎಂ.ಬಿ ತಾಯದಾಸ್ ಅವರು ಮಾತನಾಡಿ, ಖಘಖಇಗ ಸಂಘವು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹೋರಾಟಗಳನ್ನು ಬೆಳೆಸುತ್ತಿದೆ. ರೈಲ್ವೆ ಖಾಸಗೀಕರಣ ವಿರುದ್ಧ, ಹಳೆಯ ಪಿಂಚಣಿಯೋಜನೆ(ಓಕಖ) ಜಾರಿಗಾಗಿ, ವೇತನ ತಾರತಮ್ಯ ವಿರೋಧಿಸಿ, ನಾಲ್ಕು ಕಾರ್ಮಿಕ ಸಂಹಿತೆ ವಾಪಸ್ ಪಡೆಯಲು ಆಗ್ರಹಿಸಿ, ಮುಷ್ಕರದ ಹಕ್ಕಿಗಾಗಿ, ರೈಲ್ವೆ ನೌಕರರನ್ನು ಒಗ್ಗೂಡಿಸಿ, ಐಕ್ಯತೆಯಿಂದ ಬಲಿಷ್ಟ ಹೋರಾಟ ಕಟ್ಟುವ ನಿಟ್ಟಿನಲ್ಲಿ ಖಘಖಇಗ ಶ್ರಮಿಸುತ್ತಿರುವುದರಿಂದ ಎಲ್ಲಾ ನೌಕರರು ರೈಲ್ವೇ ನೌಕರರ ಹಕ್ಕು-ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವ ಖಘಖಇಗ ಸಂಘವನ್ನು ಬೆಂಬಲಿಸಬೇಕು ಈ ಚುನಾವಣೆಯಲ್ಲಿ ಕ್ರಮ ಸಂಖ್ಯೆ-04 ಇರುವ ಸಂಘದ ಚಿಹ್ನೆಯಾದ ಧ್ವಜ(ಫ್ಲಾಗ್) ಗುರುತಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡುತ್ತೇವೆ,ಎಂದರು. ಪ್ರಚಾರದಲ್ಲಿ ಗಂಗಾಧರ ಬಡಿಗೇರ, ಭುವನಾ ಬಳ್ಳಾರಿ, ಯೋಗಪ್ಪ,ದುರ್ಗಪ್ಪ,ಅಲ್ಲಾಭಕ್ಷ್ ಕಿತ್ತೂರ ಸೇರಿದಂತೆ ಇನ್ನಿತರರು ಪ್ರಚಾದಲ್ಲಿ ಪಾಲ್ಗೊಂಡಿದ್ದರು.