ಬಾಗಲಕೋಟೆ: ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ನವನಗರದ ಸೆಕ್ಟರ ನಂ.7ರಲ್ಲಿರುವ ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರದಲ್ಲಿಂದು ಜಿಲ್ಲಾ ಪಂಚಾಯತ, ಎನ್.ಆರ್.ಎಲ್.ಎಂ ಹಾಗೂ ಎಸ್.ಬಿ,ಎಮ್ ಯೋಜನೆಯಡಿ ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಸ್ವ-ಸಹಾಯ ಗುಂಪುಗಳು ತಯಾರಿಸುವ ಬಟ್ಟೆ ಬ್ಯಾಗ್ಗಳ ಜಿಲ್ಲಾ ಮಟ್ಟದ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪ್ಲಾಸ್ಟಿಕ್ ಸಾಕಷ್ಟು ಬಳಕೆಯಾಗುತ್ತಿದೆ. ಧನಕರುಗಳು ಪ್ಲಾಸ್ಟಿಕ್ ಸೇವನೆ ಮಾಡಿ ಸಾವನ್ನಪ್ಪುತ್ತಿವೆ. ಇದಕ್ಕಾಗಿ ಗ್ರಾಮದಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಪ್ಲಾಸಿಕ್ ಬಳಕೆ ನಿಷೇದಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕ್ರಮಕೈಗೊಳ್ಳಲು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ ಪ್ಲಾಸ್ಟಿಕ್ ಕೊಳೆಲಾರದಂತಹ ವಸ್ತುವಾಗಿದ್ದು, ಮಣ್ಣಿನ ಮಾಲಿನ್ಯತೆಗೆ ಪ್ರಮುಖ ಪ್ಲಾಸ್ಟಿಕ್ ಕಾರಣವಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯತ ಅಧಿಕಾರಿಗಳು ನೇರವಾಗಿ ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳ ಬದಲಾಗಿ ಬಟ್ಟೆಯಿಂದ ತಯಾರಿಸಿದ ಬ್ಯಾಗ್ಗಳನ್ನು ಬಳಸಲು ಜನರಿಗೆ ಮನವರಿಕೆ ಮಾಡಬೇಕು ಎಂದರು.
ಪ್ಲಾಸ್ಟಿಕ್ಗಳಷ್ಟೇ ಬೆಲೆಯನ್ನು ಬಟ್ಟೆಯ ಬ್ಯಾಗ್ಗಳ ದರವನ್ನು ನಿಗದಿಪಡಿಸಿದರೆ ಜನರು ಬಟ್ಟೆ ಬ್ಯಾಗ್ಗಳನ್ನು ಬಳಸಲು ಆರಂಭಿಸುತ್ತಾರೆ. ಆದ್ದರಿಂದ ಎಲ್ಲ ಗ್ರಾಮ ಪಂಚಾಯತ ಅಧಿಕಾರಿಗಳು ಮೊದಲು ತಾವುಗಳು ಬಟ್ಟೆದಿಂದ ತಯಾರಿಸಿದ ಬ್ಯಾಗ್ಗಳ್ನು ಬಳಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ನಿಷೇಧ ಮಾಡುವುದರಿಂದ ಕೇವಲ ಪರಿಸಕಷ್ಟೇ ಅಲ್ಲದೇ ಗೃಹ ಉದ್ಯೋಗಿಗಳಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ಆದಾಯ ತಂದುಕೊಟ್ಟಂತಾಗುತ್ತದೆ ಎಂದರು.
ಮೇಳದಲ್ಲಿ ಗದ್ದನಕೇರಿಯ ಖಾದಿಭಂಡಾರ, ಬಂಟನೂರಿನ ಗ್ರಾಮಪಂಚಾಯತ ಮಟ್ಟದ ಅಮೃತಬಿಂದು ಸಂಜೀವಿನಿ ಒಕ್ಕೂಟ, ಕಟಗೇರಿ ಗ್ರಾಮಪಂಚಾಯತ ಮಟ್ಟದ ಚಾಮುಂಡೇಶ್ವರಿ ಸಂಜೀವಿನಿ ಒಕ್ಕೂಟ, ಮರೋಳ ಗ್ರಾಮಪಂಚಾಯತ ಮುಕಾಂಬಿಕಾ ಸಂಜೀವಿನಿ ಒಕ್ಕೂಟ, ಕೂಡಲಸಂಗಮ ಗ್ರಾಮ ಪಂಚಾಯತ ಕೂಡಲಸಂಗಮೇಶ್ವರ ಸಂಜೀವಿನಿ ಒಕ್ಕೂಟ, ಸೊನ್ನ ಗ್ರಾಮ ಪಂಚಾಯತ ಮಟ್ಟದ ಮಲ್ಲಿಗೆ ಸಂಜೀವಿನಿ ಒಕ್ಕೂಟ, ಪಟ್ಟದಕಲ್ಲಿನ ಪ್ರಗತಿ ವಿಕಲಚೇತನರ ಒಕ್ಕೂಟ, ಮಹಿಳಾ ಗೃಹ ಉದ್ಯೋಗಿ ಪ್ರೀತಿ ಹೋಂ ಇಂಡ್ರಸ್ಟ್ರಿಸ್ ನೀರಬೂದಿಹಾಳ ಗ್ರಾಮಪಂಚಾಯತ ಮಟ್ಟದ ಒಕ್ಕೂಟ, ಬೀಳಗಿಯ ಸುಮಂಗಲಾ ಗ್ರಾಮೋದ್ಯೋಗ ಒಕ್ಕೂಟ ಸೇರಿದಂತೆ ಅನೇಕ ಆಹಾರ ಮತ್ತು ಬಟ್ಟೆ ಮಳಿಗೆಗಳು ಎಲ್ಲರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಪಾಟೀಲ, ಜಿಲ್ಲಾ ಪಂಚಾಯತ ಯೋಜನಾ ನಿದರ್ೇರ್ಶಕ ವಿ.ಎಸ್.ಹಿರೇಮಠ, ಪ್ರತಿಯೊಂದು ಗ್ರಾಮದ ಗ್ರಾಮಪಂಚಾಯತ ಅಧಿಕಾರಿಗಳು ಸ್ತ್ರೀಶಕ್ತಿ ಸಂಘದವರು, ಶಿಬಿರಾಥರ್ಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.