ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ: ಬಾಬಾರ

To increase interest in learning Objective of Kalika Habba: Babara

ಶಿಗ್ಗಾವಿ 21: ಮಕ್ಕಳಿಗೆ  ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ ಎಂದು  ತಾಲೂಕ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಬಾರ ಬೊವಾಜಿ ಹೇಳಿದರು.     

ತಾಲೂಕಿನ ಚಿಕ್ಕಬೇಂಡಿಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಿರೇಬೇಂಡಿಗೇರಿ ಸಮೂಹ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಕಲಿಕೆಯಲ್ಲಿ ಕೊರತೆಯಾಗಿದ್ದು, ಅದನ್ನು ಸರಿದೂಗಿಸಲು ಕಲಿಕಾ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.     

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಹಜರೇಸಾಬ ಸಾರಾವರಿ, ಸದಸ್ಯರಾದ  ಉಮೇಶ್ ಬೇನಕನಹಳ್ಳಿ, ಖಲಂದರ ಸಾರಾವರಿ, ಬಸವರಾಜ ನಂದೆಣ್ಣವರ, ನಜೀರ್ ಮುಶೆಖಾನ್ನವರ, ಹಕಾನಸಾಬ ಯಾದುಸಾಬನವರ, ಗ್ರಾಂ ಪಂ ಉಪಾಧ್ಯಕ್ಷ ಚನ್ನಬಸಪ್ಪ ಮ್ಯಾಗೇರಿ, ಸದಸ್ಯರಾದ  ರುದ್ರವ್ವ ನಂದೆಣ್ಣವರ, ಹುಸೇನ್ ಪಟೇಲ ಪಾಟೀಲ, ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಣ ಸಂಯೋಜಕರು, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.